ಮೇಕೆದಾಟು ಪಾದಯಾತ್ರೆಗೆ ಚಿತ್ರರಂಗ ಬೆಂಬಲ

ಬೆಂಗಳೂರು:ಮೇಕೆದಾಟು ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದುಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ಹೇಳಿದ್ದಾರೆ.

ಫಿಲಂ ಚೇಂಬರ್ ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯ ನಂತರ ಮಾತನಾಡಿದ ಅವರು, ಪಕ್ಷಾತೀತ ಹೋರಾಟ ವಾಗಿರುವುದರಿಂದ ನಮ್ಮ ಬೆಂಬಲವಿದೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು  ಫಿಲಂ ಚೇಂಬರ್ ಗೆ ಬಂದು ಬೆಂಬಲ ಕೋರಿದ್ದರು ನಾಡು,ನುಡಿ ಜಲಕ್ಕಾಗಿ ಸದಾ ನಮ್ಮ ಬೆಂಬಲವಿರುತ್ತದೆ ಎಂದು ಹೇಳಿದರು.

ತಮಿಳುನಾಡಿಗೆ 128 ಟಿಎಂಸಿ ಬಿಡಬೇಕು ಆದರೆ 400 ಟಿಎಂಸಿ ನೀರು ಹರಿಯುತ್ತಿದೆ. ಹೆಚ್ಚುವರಿಯಾಗಿ ಹರಿಯುತ್ತಿರುವ ನೀರಿಗಾಗಿ ನಾವು ಹೋರಾಡಬೇಕಿದೆ ಎಂದರು.

ಬೆಂಗಳೂರು ಬೃಹದಾಕಾರವಾಗಿ ಬೆಳೆಯುತ್ತಿದೆ ಕುಡಿಯುವ ನೀರು ಹೆಚ್ಚುತ್ತಿದೆ ಇದನ್ನು ನೀಗಿಸಲು ಮೇಕೆದಾಟು ಯೋಜನೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೊರೋನ ನಿಯಮಗಳು ಇರುವುದರಿಂದ ಭೌತಿಕವಾಗಿ ನಾವೆಲ್ಲರೂ ಒಂದೇ ಬಾರಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ ಆದರೆ ಒಂದೊಂದು ದಿನ ಅವರವರ ಅನುಕೂಲಕ್ಕೆ ತಕ್ಕಹಾಗೆ ಹೋರಾಟದಲ್ಲಿ ಭಾಗಿಯಾಗುತ್ತಾರೆ ಎಂದು ಅವರು ತಿಳಿಸಿದರು.

ಸಾರಾ ಗೋವಿಂದ್ ಮಾತನಾಡಿ,ನೀರಿಗಾಗಿ ಹೋರಾಡುವುದು ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿ‌ ಎಂದು ಹೇಳಿದರು.

ಕುಡಿಯುವ ನೀರಿನ ಹಾಹಾಕಾರ ಇದೆ ಕೇಂದ್ರ ಸರ್ಕಾರ ಯಾವುದೇ ಒತ್ತಡಗಳಿಗೆ ಮಣಿಯದೆ ಮೇಕೆದಾಟು ಯೋಜನೆಯನ್ನು ಜಾರಿಗೆ ತರಬೇಕು ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ಕಲಾವಿದರ ಸಂಘದ ಅಧ್ಯಕ್ಷ ರಾಕ್ ಲೈನ್ ವೆಂಕಟೇಶ್ ಅವರ ಮೂಲಕ ಎಲ್ಲಾ ಕಲಾವಿದರಿಗೂ ಹೋರಾಟದಲ್ಲಿ ಭಾಗಿಯಾಗಲು ಪತ್ರವನ್ನು ಕಳಿಸಲಾಗಿದೆ ಎಲ್ಲರೂ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಚಂದ್ರು ಮಾತನಾಡಿ ಕೋವಿಡ್ ನಿಯಮಗಳನ್ನು ಪಾಲಿಸುತ್ತಾ ಮೇಕೆದಾಟು ಯೋಜನೆ ಜಾರಿ ಕುರಿತು ಹೋರಾಟ ಮಾಡಲಾಗುತ್ತದೆ. ಸರ್ಕಾರದ ಎಲ್ಲಾ ನಿಯಮಗಳನ್ನು ನಾವು ಪಾಲಿಸುತ್ತೇವೆ ಎಂದು ತಿಳಿಸಿದರು.

ನಮಗೆ ಕೇಂದ್ರ ಸರ್ಕಾರದ ವಿರುದ್ಧ ಆಗಲಿ ಅಥವಾ ರಾಜ್ಯ ಸರ್ಕಾರದ ವಿರುದ್ಧವಾಗಲಿ ಯಾವುದೇ ಘರ್ಷಣೆ ಇಲ್ಲ,ನಮಗೆ ಬೇಕಾಗಿರುವುದು ಕುಡಿಯಲು ನೀರು ಅದಕ್ಕಾಗಿ ನಮ್ಮ ಹೋರಾಟ ಎಂದರು.

ರಾಜ್ಯ ಸರ್ಕಾರ ಕರುಣ ನೆಪಹೇಳಿ ಹೋರಾಟವನ್ನು ತಡೆಯುವ ಪ್ರಯತ್ನ ಮಾಡುತ್ತಿದೆ ಎಂದು ನಟಿ

ಜಯಮಾಲ ಹೇಳಿದರು.

ನಟಿ ಉಮಾಶ್ರೀ ಮಾತನಾಡಿ ಕುಡಿಯವ ನೀರಿಗೆ ನಮ್ಮ ಹೋರಾಟ,ಅದಕ್ಕೆ ನಮ್ಮ ಬೆಂಬಲ ಎಂದರು.