ಮೂವರು ಭಯೋತ್ಪಾದಕರ ಹತ್ಯೆ

ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಝೋಲ್ವಾ ಕ್ರಾಲ್ಪೋರಾ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ಸೇನೆ ನಡೆಸಿದ ಎನ್ ಕೌಂಟರ್ ನಲ್ಲಿ ಮೂವರು ಭಯೋತ್ಪಾದಕರು ಮೃತಪಟ್ಟಿದ್ದಾರೆ.

ಭಯೋತ್ಪಾದಕರ ಗುರುತು ಮತ್ತು ಸಂಬಂಧವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೋಲೀಸರು ತಿಳಿಸಿದ್ದಾರೆ.

ಕಳೆದ ರಾತ್ರಿ ಬಂದ ಮಾಹಿತಿ ಅನ್ವಯ ಸೇನಾ ಪಡೆ ಮತ್ತು ವಿಷೇಶ ಪೋಲಿಸರು ಉಗ್ರರು ಅಡಗಿರುವ ಸ್ಥಳ ತಲುಪುತ್ತಿದ್ದಂತೆ ಭಯೋತ್ಪಾದಕರು ಗುಂಡು ಹಾರಿಸಲಾರಂಬಿಸಿದರು.

ಇದಕ್ಕೆ ಸೇನಾ ಯೋದರು ದಿಟ್ಟ ಉತ್ತರ ನೀಡಿ ಉಗ್ರರು ಅಡಗಿದ್ದ ಪ್ರದೇಶ ಸುತ್ತುವರೆದು ನಡೆಸಿದ ಎನ್ಕೌಂಟರ್‍ನಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದರೆ.

ಅಪಾರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಜಿಪಿ ಕಹ್ಮಿರ್‍ ಹೇಳಿದ್ದಾರೆ.