ಪ್ರಾಣಿಗಳ ಬಗ್ಗೆ ಅನುಕಂಪ ತೋರಿ -ವಿಕ್ರಮ್ ಅಯ್ಯಂಗಾರ್ ಮನವಿ

ಮೈಸೂರು: ದಿನೇ ದಿನೇ ಕೊರೊನಾ ಸೋಂಕು ಹರಡುತ್ತಲೇ ಇದ್ದು, ಸಾರ್ವಜನಿಕರು ಮನೆಬಿಟ್ಟು ಹೊರಬರಲು ಹೆದರುತ್ತಿದ್ದಾರೆ,ಹಾಗಯೇ  ಪ್ರಾಣಿಗಳಸ್ಥಿತಿಯೂ ಅಯೋಮಯವಾಗಿದೆ.

ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ  ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಹಾರಾಜ ಮೈದಾನ,ವಸ್ತುಪ್ರದರ್ಶನ ಅವರಣ, ಚಾಮುಂಡಿಬೆಟ್ಟ ತಪ್ಪಲು ,ಹಾಗೂ ಪ್ರಮುಖ ಉದ್ಯಾನವನದಲ್ಲಿ 200ಕ್ಕೂ ಹೆಚ್ಚು  ಬೀದಿ ನಾಯಿಗಳಿಗೆ ಆಹಾರ ವಿತರಿಸಲಾಯಿತು.

ವೀಕೆಂಡ್ ಕರ್ಫ್ಯೂ ಮುಗಿಯವರಿಗೂ ನಿರಂತರವಾಗಿ ಬೀದಿ ನಾಯಿಗಳಿಗೆ ನಮ್ಮ ಟ್ರಸ್ಟ್ ಆಹಾರ ನೀಡಲಿದೆ  ಎಂದು ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ಹೇಳಿದರು.

ಈ ಹಿಂದೆ ಲಾಕ್  ಡೌನ್  ಸಂದರ್ಭದಲ್ಲೂ ಸಹ ನಿರಂತರವಾಗಿ ಬೀದಿನಾಯಿಗಳು ಹಾಗೂ  ಕೋತಿಗಳು ಮತ್ತು ಬೀದಿ ಬದಿಯ  ದನಕರುಗಳಿಗೆ ಆಹಾರ ನೀಡುತ್ತ ಬಂದಿದ್ದೇವೆ  ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ವೀಕೆಂಡ್ ಕರ್ಫ್ಯೂ ಇರುವುದರಿಂದ ನಾಯಿಗಳು ಆಹಾರ ಸಿಗದೆ ಹಸಿವೆಯಿಂದ ಕಂಗೆಟ್ಟಿವೆ. ಹಲವೆಡೆ ಮನುಷ್ಯನ ಮೇಲೆ ದಾಳಿ ಮಾಡುತ್ತಿರುವ ಘಟನೆಗಳೂ ನಡೆಯುತ್ತಿವೆ. ಹಾಗಾಗಿ, ಅವುಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು  ತಿಳಿಸಿದರು.

ವಿಕ್ರಮ ಅಯ್ಯಂಗಾರ್  ಫೇಸ್‌ಬುಕ್‌ ಹಾಗೂ ಜಾಲತಾಣಗಳನ್ನು ಬಳಸಿಕೊಂಡು ಬೀದಿ ನಾಯಿಗಳಿಗೆ ಆಹಾರ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಕೊರೊನಾ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಸಂಕಷ್ಟ ತಂದಿದೆ. ಇಂತಹ ಕಠಿಣ ಸಮಯದಲ್ಲಿ ಸಾರ್ವಜನಿಕರು ಪ್ರಾಣಿಗಳ ಮೇಲೆ ಅನುಕಂಪ ಹಾಗೂ ದಯೆ ತೋರಬೇಕು ಎಂದು ಮನವಿ ಮಾಡಿದ್ದರು.

ಬೀದಿ ನಾಯಿಗಳು, ಬೀದಿ ದನಗಳು, ಪ್ರಾಣಿ ಪಕ್ಷಿಗಳು ನೀರು ಆಹಾರ ಇಲ್ಲದೆ ಪರಿತಪಿಸುತ್ತಿವೆ. ಹಾಗಾಗಿ, ಸಾರ್ವಜನಿಕರು ನಿತ್ಯ ಒಂದು ಪ್ಲೇಟ್‌ ಆಹಾರ ಹಾಗೂ ನೀರನ್ನು ಗೇಟ್‌ನಿಂದ ಹೊರಗೆ ಇಡುವಂತೆ ಕೋರಿದರು.

ಈ ಸಂದರ್ಭದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೊಳ ಜಗದೀಶ್,ರಾಕೇಶ್ ಕುಂಚಿಟಿಗ,ಸೇರಿದಂತೆ ಇನ್ನಿತರರು ಹಾಜರಿದ್ದರು.