ಮಾಸ್ಕ್ ಧರಿಸದವರಿಂದ 38,100 ರೂ. ದಂಡ ಸಂಗ್ರಹ

ಮೈಸೂರು: ಕೊರೊನ ಪ್ರಕರಣ‌ ಹೆಚ್ಚಾಗುತ್ತಿರುವುದರಿಂದ ನಗರದಲ್ಲೂ ಮಾಸ್ಕ್ ಕಡ್ಡಾಯ ಮಾಡಲಾಗಿದೆ.

ಆದರೂ ಕೆಲವರು ಮಾಸ್ಕ್ ಧರಿಸದೆ ಸಂಚರಿಸುವುದು ಕಂಡು ಬರುತ್ತಿದೆ.ಹಾಗಾಗಿ ದಂಡ ಪ್ರಕ್ರಿಯೆ ಮುಂದುವರಿದಿದೆ.

ಪೊಲೀಸರು ಮೈಸೂರು ನಗರದಲ್ಲಿ ಒಂದೇ ದಿನ 219ಪ್ರಕರಣಗಳನ್ನು ದಾಖಲಿಸಿ 38,100ದಂಡ ವಸೂಲು ಮಾಡಿದ್ದಾರೆ.

ನಿತ್ಯವೂ ಮಾಸ್ಕ್ ಧರಿಸದವರಿಂದ ದಂಡ ವಸೂಲು ಮಾಡುವ ಪ್ರಕ್ರಿಯೆ ನಡೆಯಲಿದೆ.

ಜನರು ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಪ್ರದೀಪ್ ಗುಂಟಿ ಎಚ್ಚರಿಕೆ ನೀಡಿದ್ದಾರೆ.