ಕರೋನ ವಾರಿಯರ್ಸ್ ಗೆ ಟೀ, ಬನ್, ಬಿಸ್ಕತ್ತು, ನೀರಿನ ಬಾಟಲ್ ವಿತರಣೆ

ಮೈಸೂರು: ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೊರ್ಚಾದ ವತಿಯಿಂದ ಮೈಸೂರು ನಗರದಲ್ಲಿ ವಿಕೇಂಡ್ ಕರ್ಫೂ ಕಠಿಣವಾಗಿ ಬಿಗಿ ಭದ್ರತೆಯಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಕೆಲಸ ನಿರ್ವಹಿಸುತ್ತಿರುವ ಪೆÇೀಲಿಸ್ ನವರಿಗೆ ಟೀ, ಬಿಸ್ಕತ್ತು, ಬ್ರೆಡ್, ನೀರಿನ ಬಾಟಲ್ ವಿತರಿಸಿ ಅವರಿಗೆ ಆತ್ಮ ಸ್ಥೈರ್ಯ ತುಂಬಲಾಯಿತು.

ನಂತರ ಮಾತನಾಡಿದ ಹಿಂದುಳಿದ ವರ್ಗಗಳ ಮೊರ್ಚಾದ ಮೈಸೂರು ನಗರದ ಅಧ್ಯಕ್ಷ ಜೋಗಿಮಂಜು, ವಿಶ್ವದಾದ್ಯಂತ ಕರೋನ ಮೂರನೇ ಅಲೆಯ ರೂಪಾಂತರಿ ಓಮಿಕ್ರಾನ್ ವೇಗ ಅತಿಯಾಗಿದ್ದು ಇದರ ವೇಗ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ವೀಕೆಂಡ್ ಕರ್ಫ್ಯೂ ವಿಧಿಸಿದೆ. ಸಾರ್ವಜನಿಕರಿಗೆ ದಿನ ನಿತ್ಯದ ಅಹಾರ ಪದಾರ್ಥಗಳು ಸಾಮಾನ್ಯವಾಗಿ ಸಿಗುವ ನಿಟ್ಟಿನಲ್ಲಿ ಸಹಕಾರಿಯಾಗಿದೆ. ಹಾಗೇಯೆ ಕರೋನ ವಾರಿಯರ್ಸ್‍ಗಳಾದ ವೈದ್ಯರು, ಪೆÇೀಲೀಸರು ತಮ್ಮ ಪ್ರಾಣದ ಹಂಗನ್ನೂ ತೊರೆದು ಸಾರ್ವಜನಿಕರ ಸೇವೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಭಾ.ಜ.ಪ.ದ ಕಾರ್ಯಕರ್ತರು ಅವರೊಂದಿಗೆ ಕೈ ಜೋಡಿಸಿ ಅವರು ಮಾಡುವ ಕೆಲಸಕ್ಕೆ ಸಹಕಾರಿ ಯಾಗಿರುತ್ತಾರೆ ಎಂದು ತಿಳಿಸಿದರು.

ಮೈಸೂರಿನ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಲಕ್ಷ್ಮಿಪುರಂ ಠಾಣೆ, ವಿದ್ಯಾರಣ್ಯ ಪುರಂ ಠಾಣೆ, ಕೃಷ್ಣರಾಜ ಠಾಣೆ, ಅಶೋಕಪುರಂ ಠಾಣೆ, ಕುವೆಂಪು ನಗರ ಠಾಣೆ, ನಜರಬಾದ್ ಠಾಣೆ, ಸರಸ್ವತಿಪುರಂ ಠಾಣೆಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರುಗಳಿಗೆ ಆತ್ಮ ಸ್ಥೈರ್ಯ ತುಂಬಲಾಯಿತು.

ಈ ಸಂಧರ್ಭದಲ್ಲಿ ಬಿಜೆಪಿ ಮೈಸೂರು ಓ.ಬಿ.ಸಿ. ಪ್ರಧಾನ ಕಾರ್ಯದರ್ಶಿ ಮಣಿರತ್ನಂ, ಸೋಶಿಯಲ್ ಮೀಡಿಯಾ ಸಂಚಾಲಕ ಅಭಿಲಾಶ್ ಕೊಟಾಯ್, ಎಸ್ಸಿ ಮೊರ್ಚಾ ಪ್ರಧಾನ ಕಾರ್ಯದರ್ಶಿ ಜಯರಾಮ್ ಇದ್ದರು.