ಮೈಸೂರಿನಲ್ಲಿ ಪಾದಯಾತ್ರೆಗೆ ಸ್ವಾತಂತ್ರ್ಯ ಸೇನಾನಿಗಳ ಸಾಥ್

ಮೈಸೂರು: ಮೇಕೆದಾಟು ಪಾದಯಾತ್ರೆಗೆ ಮೈಸೂರಿನಲ್ಲಿ ಮಂಗಳವಾರ ಬೆಳಿಗ್ಗೆ ಸ್ವಾತಂತ್ರ್ಯ ಸೇನಾನಿ ಗಳು ಚಾಲನೆ ನೀಡಿದರು.

ಮೈಸೂರಿನಿಂದ ಸುಮಾರು 8 ಸಾವಿರ ಮಂದಿ ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನು ಸಾಂಕೇತಿಕವಾಗಿ ಮೈಸೂರಿನ ಗಾಂಧಿ ವೃತ್ತದಲ್ಲಿ ಬೆಳಿಗ್ಗೆ ಏಳು ಗಂಟೆಗೆ ಗಾಂಧಿ ಪ್ರತಿಮೆ ಎದುರು ಸ್ವಾತಂತ್ರ್ಯ ಸೇನಾನಿಗಳಾದ  ಟಿ.ಪುಟ್ಟಣ್ಣ ಹಾಗೂ ಶ್ರೀರಂಗ ಶೆಟ್ಟಿ ಗಿಡಕ್ಕೆ   ನೀರು ಹಾಕುವುದರ ಮೂಲಕ ಚಾಲನೆ ನೀಡಿದರು.

ಸ್ವಾತಂತ್ರ್ಯ ಸೇನಾನಿಗಳು ಸಾಂಕೇತಿಕವಾಗಿ ದೊಡ್ಡಗಡಿಯಾರದವರೆಗೆ  ಹೆಜ್ಜೆಹಾಕಿದರು.

ಈ ಸಂದರ್ಭದಲ್ಲಿ ಹುಣಸೂರು ಶಾಸಕ   ಮಂಜುನಾಥ್,ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ ಜೆ. ವಿಜಯ್ ಕುಮಾರ್, ಮಾಜಿ ಶಾಸಕರಾದ ವಾಸು,  ಕಳಲೆ ಕೇಶವ ಮೂರ್ತಿ,  ವಿಧಾನ ಪರಿಷತ್ ಸದಸ್ಯ ಆರ್ ಧರ್ಮಸೇನ ಸೇರಿದಂತೆ ವಿವಿಧ ಹಂತದ ಕಾಂಗ್ರೆಸ್ ಪದಾಧಿಕಾರಿಗಳು ಭಾಗಿಯಾಗಿದ್ದರು.