ನವದೆಹಲಿ: ವೈದ್ಯಕೀಯ ಕ್ಷೇತ್ರದಲ್ಲಿ ಇರುವವರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಲಸಿಕೆ ನೀಡಲಾಗುತ್ತದೆ.
ಇದಕ್ಕಾಗಿ ನೋಂದಣಿ ಕಾರ್ಯ ಶನಿವಾರದಿಂದ ಪ್ರಾರಂಭವಾಗಿದೆ.
ಕೋವಿಡ್ ಮೂರನೇ ಅಲೆಯಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವ ವೈದ್ಯರು, ಶುಶ್ರೂಷಕರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಮೊದಲ ಹಂತದಲ್ಲಿ ಜನವರಿ 10ರಿಂದ ಬೂಸ್ಟರ್ ಲಸಿಕೆ ನೀಡಲಾಗುವುದು.
ಅದಕ್ಕಾಗಿ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆದರೂ ನೋಂದಣಿಯಾಗದೆ ನೇರವಾಗಿ ಕೇಂದ್ರಗಳಿಗೆ ಹೋಗಿಯೂ ಲಸಿಕೆ ಪಡೆದುಕೊಳ್ಳಬಹುದಾಗಿದೆ.
ಮೊದಲ ಮತ್ತು ಎರಡನೆ ಡೋಸ್ ಪಡೆದು ಆರು ತಿಂಗಳಿಗೂ ಹೆಚ್ಚಿನ ಸಮಯ ಆಗಿರುವವರಿಗೆ ಮೂರನೇ ಡೋಸ್ ಅನ್ನು ಬೂಸ್ಟರ್ ಲಸಿಕೆಯನ್ನಾಗಿ ನೀಡಲಾಗುತ್ತದೆ.
ಕೊರೊನಾದ ಮೂರನೆ ಅಲೆ ಸನ್ನಿವೇಶದಲ್ಲಿ ಹಲವು ಮಂದಿ ವೈದ್ಯರಿಗೂ ಕೋವಿಡ್ ಸೋಂಕು ತಗುಲಿದೆ.
ಭಾರತದಲ್ಲಿ ಮೊದಲ ಮತ್ತು ಎರಡನೆ ಅಲೆಯಲ್ಲೂ ವೈದ್ಯಕೀಯ ಸಿಬ್ಬಂದಿ ತೊಂದರೆಗೆ ಒಳಗಾಗಿದ್ದರು.
ಹೀಗಾಗಿ ಮೂರನೆ ಅಲೆಯಲ್ಲಿ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ.
ಮೊದಲೆರಡು ಡೋಸ್‍ಗೆ ಯಾವ ಲಸಿಕೆ ಪಡೆಯಲಾಗಿತ್ತೋ ಬೂಸ್ಟರ್ ಲಸಿಕೆಗೂ ಅದೇ ಕಂಪೆನಿಯ ಲಸಿಕೆ ಪಡೆಯಬೇಕು ಕೇಂದ್ರ ಸರ್ಕಾರ ಸುತ್ತೋಲೆ ರವಾನಿಸಿದೆ.

