ಬೆಂಗಳೂರು:ಕಾಂಗ್ರೆಸ್ ನಾಯಕರು ತಮ್ಮ ಹಠ ತೊರೆದು, ಕರೋನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ಸರಕಾರದ ಜೊತೆಗೆ ಸಹಕರಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.
ಶನಿವಾರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಸಚಿವರು,ಕೊರೊನ ಉಲ್ಬಣ ವಾಗುತ್ತಿರುವ ಇಂತಹ ಸಂದರ್ಬದಲ್ಲಿ ಮುಂಜಾಗ್ರತೆಯಾಗಿ ತೆಗೆದುಕೊಂಡ ನಿರ್ಭಂಧಗಳನ್ನು ಬೆಂಬಲಿಸಿ, ಸಹಕರಿಸಬೇಕು ಎಂದು ಕೋರಿದರು.
ಮೇಕೆದಾಟು ಯೋಜನೆ ಸಂಬಂಧ ಇರುವ ವಿವಾದ ಅತ್ಯುಚ್ಛ ನ್ಯಾಯಾಲಯದ ಅಂಗಳದಲ್ಲಿದೆ.
ಕಾಂಗ್ರೆಸ್ ನವರು ಸರಕಾರ ನಡೆಸಿದವರು, ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಹೇಳಿದರು.
ಅನಾರೋಗ್ಯ ಬಂದ ಮೇಲೆ, ಸಮಸ್ಯೆ ಎದುರಿಸುವುದಕ್ಕಿಂತ, ಬಾರದಂತೆ ತಡೆಯುವುದು ಅತ್ಯುತ್ತಮ ಪ್ರಯತ್ನ ಎಂದರು.
ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಪ್ರೇರಿತ ಎಂದು ಟೀಕಿಸಿದರು.
ವಾರಾಂತ್ಯ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ವೇಳೆ ಪೊಲೀಸರು ಅತ್ಯಂತ ಸಹನೆಯಿಂದ ವರ್ತಿಸಬೇಕು, ಸಾರ್ವಜನಿಕರೂ ಕೂಡಾ ಸರಕಾರದ ಜತೆ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಕಾನೂನನ್ನು ಉಲ್ಲಂಘಿಸಿ ದವರ ವಿರುಧ್ದ ಪ್ರಕೃತಿ ವಿಕೋಪ ತಡೆ ಕಾಯ್ದೆಯಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು.

