ಮೇಕೆದಾಟು ಯೋಜನೆಗೆ ತೊಡಕಾದರೆ ಡಿಕೆಶಿ, ಸಿದ್ದರಾಮಯ್ಯ ಹೊಣೆ – ಸಚಿವ ಬೈರತಿ

ಬೆಂಗಳೂರು:ಮೇಕೆದಾಟು ಯೋಜನೆಗೆ ಏನಾದರೂ ತೊಡಕಾದರೆ ಅದಕ್ಕೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ಧರಾಮಯ್ಯನವರೇ ಹೊಣೆಯಾಗುತ್ತಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಎಚ್ಚರಿಸಿದರು.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,ಮೇಕೆದಾಟು ಯೋಜನೆ ಸೂಕ್ಷ್ಮವಿಷಯ,ಇದನ್ನು ಬೆಳಗಾಗುವುದರಲ್ಲಿ‌ ಇತ್ಯರ್ಥ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಇದರ ಬಗ್ಗೆ ಇರುವ ಕಾನೂನು ತೊಡಕುಗಳನ್ನು ಪರಿಹರಿಸಿಕೊಂಡು ಮುಂದುವರಿಯಬೇಕಿದೆ ಎಂದರು.

ರಾಜ್ಯ ಸರ್ಕಾರ ಈ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ, ಆದರೆ ಕಾಂಗ್ರೆಸ್ ನವರು ದುಡುಕಿನ ಹೆಜ್ಜೆ ಇಟ್ಟು ತೊಂದರೆ ಮಾಡುತ್ತಿದ್ದಾರೆ ಎಂದು ಬೈರತಿ ಬಸವರಾಜ ಆರೋಪಿಸಿದರು.