ಅಮೆರಿಕ: ವೈದ್ಯಕೀಯ ಜಗತಿನಲ್ಲೇ ಪ್ರಪ್ರಥಮವಾಗಿ,ಹಂದಿಯ ಹೃದಯವನ್ನು ಮಾನವನಿಗೆ ಜೋಡಿಸಿ ನಡೆಸಲಾದ ಪ್ರಾಯೋಗಿಕ ಶಸ್ತ್ರಚಿಕಿತ್ಸೆಯು ಅಮೆರಿಕದಲ್ಲಿ ಯಶಸ್ವಿಯಾಗಿದೆ.
ಸಾವಿನಂಚಿನಲ್ಲಿದ್ದ ರೋಗಿಗೆ ನಡೆಸಲಾದ ಅಪರೂಪದ ಪ್ರಯೋಗ ಫಲ ನೀಡಿದೆ. ಶಸ್ತ್ರಚಿಕಿತ್ಸೆ ನಡೆದ ಮೂರು ದಿನಗಳ ನಂತರ ರೋಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೇರಿಲ್ಯಾಂಡ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ನಿಜವಾಗಿಯೂ ಸಾಮಾನ್ಯ ಹೃದಯದಂತೆ ಇದೂ ಕೂಡಾ ಕಾರ್ಯನಿರ್ವಹಿಸುತ್ತಿದೆಯೇ ಎಂದು ತಿಳಿದುಕೊಳ್ಳಲು ಈ ಶಸ್ತ್ರ ಚಿಕಿತ್ಸೆ ತುಂಬಾ ಬೇಗ ಆಗಿದ್ದರೂ, ಮನುಷ್ಯನ ಜೀವ ಉಳಿಸುವುದಕ್ಕೆ ಕಸಿ ಮಾಡಲು ಪ್ರಾಣಿಗಳ ಅಂಗಗಳನ್ನು ಬಳಸಿಕೊಳ್ಳುವ ದಶಕಗಳ ಕಾಲದ ಅನ್ವೇಷಣೆಯಲ್ಲಿ ಒಂದು ಹೆಜ್ಜೆ ಮುಂದೆ ಸಾಗಿದ್ದೇವೆ ಎಂದು ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಕಲ್ ಸೆಂಟನರ್‍ನ ವೈದ್ಯರು ತಿಳಿಸಿದ್ದಾರೆ.
ಡೇವಿಡ್ ಬೆನೆಟ್ ಎಂಬ 57 ವರ್ಷದ ಮೇರಿಲ್ಯಾಂಡ್ ನಿವಾಸಿಯ ಜೀವ ಉಳಿಸುವ ಬೇರೆ ಯಾವುದೇ ಆಯ್ಕೆಗಳಿರಲ್ಲಿಲ್ಲ ಆದರೆ ಅವರಿಗೆ ಪ್ರಾಣಿಯ ಹೃದಯ ಅಳವಡಿಸುವ ಪ್ರಯೋಗದ ಬಗ್ಗೆ ವೈದ್ಯರು ತಿಳಿಸಿದರು ಆಗ ನನಗೆ ಅಚ್ಚರಿಯಾಯಿತು.
ಕೊನೆಗೆ ಅನುಮತಿ ನೀಡಿದೆ ಎಂದು ರೋಗಿಯ ಪುತ್ರ ತಿಳಿಸಿದ್ದಾರೆ.
ಬೆನೆಟ್ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುವವರೆಗೆ ಮುಂದಿನ ಕೆಲವು ವಾರಗಳು ನಿರ್ಣಾಯಕವಾಗಿರುತ್ತವೆ ಮತ್ತು ವೈದ್ಯರು ಅವರ ಹೃದಯವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಕಸಿ ಮಾಡಲು ಮಾನವ ಅಂಗಗಳ ದೊಡ್ಡ ಕೊರತೆಯಿದೆ, ಬದಲಿಗೆ ಪ್ರಾಣಿಗಳ ಅಂಗಗಳನ್ನು ಬಳಸುವುದು ಹೇಗೆ ಎಂಬುದನ್ನು ಕಂಡುಹಿಡಿಯಲು ವಿಜ್ಞಾನಿಗಳನ್ನು ಇದು ಪ್ರೇರೇಪಿಸುತ್ತದೆ ಎಂದು ವಿಶ್ವವಿದ್ಯಾಲಯದ ಪ್ರಾಣಿಯಿಂದ ಮನುಷ್ಯನಿಗೆ ಕಸಿ ಕಾರ್ಯಕ್ರಮದ ವೈಜ್ಞಾನಿಕ ನಿರ್ದೇಶಕ ಡಾ. ಮುಹಮ್ಮದ್ ಮೊಹಿಯುದ್ದೀನ್ ಹೇಳಿದ್ದಾರೆ.
ಕಳೆದ 1984 ರಲ್ಲಿ ಶಿಶುವಿಗೆ ಬಬೂನ್ ಹೃದಯ ಕಸಿ ಮಾಡಲಾಗಿತ್ತು 21 ದಿನ ಆ ಮಗು ಬದುಕಿತ್ತು.

