ಕನಕಪುರ: ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಶಕ್ತಿ ಪ್ರದರ್ಶನವಾಗಿದೆ.
ಸೋಮವಾರ ಸಂಜೆ ಕನಕಪುರಕ್ಕೆ ತಲುಪಿದ ಮೇಕೆದಾಟು ಪಾದಯಾತ್ರೆ ಮಂಗಳವಾರ ಬೆಳಗ್ಗೆ ಮತ್ತೆ ಆರಂಭವಾಯಿತು.
ಮೂರನೇ ದಿನದಲ್ಲಿ ಕನಕಪುರ ಮುಖ್ಯರಸ್ತೆಯಲ್ಲೆಲ್ಲಾ ಜನಸಾಗರ ತುಂಬಿ ತುಳುಕುತ್ತಿತ್ತು.
ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರೋಡ್ ಶೋನಲ್ಲಿ ಭಾಗವಹಿಸಿದ್ದರು.
ವಾಹನ ಹತ್ತಿ ನಿಂತ ಇಬ್ಬರು ನಾಯಕರ ಮೇಲೆ ಕಾರ್ಯಕರ್ತರು ಪುಷ್ಪವೃಷ್ಠಿಗರೆದರು. ಭಾರೀ ಗಾತ್ರದ ಸೇಬಿನ ಹಾರ ಮತ್ತು ಹೂವಿನ ಹಾರ ಹಾಕಲಾಯಿತು.
ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
ಬೆಳಗ್ಗೆ ಕನಕಪುರ ನಗರದಿಂದ ಪಾದಯಾತ್ರೆ ಆರಂಭಗೊಂಡಾಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭಾವಹಿಸಿದ್ದರು. ಅನಾರೋಗ್ಯ ನಿಮಿತ್ತ ಒಂದಷ್ಟು ದೂರ ತೆರೆದ ವಾಹನದಲ್ಲಿ ಸಾಗಿದರು. ನಂತರ ಡಿ.ಕೆ.ಶಿವಕುಮಾರ್ ವಾಹನದಿಂದ ಇಳಿದು ಪಾದಯಾತ್ರೆ ಆರಂಭಿಸಿದರು.
ಗಾಣಾಲು ವೀರಭದ್ರಸ್ವಾಮಿ ದೇವಸ್ಥಾನದವರೆಗೂ 7 ಕಿಲೋ ಮೀಟರ್ ಪಾದಯಾತ್ರೆ ನಡೆಯಿತು.ಪಾದಯಾತ್ರೆ ರಾತ್ರಿ ವೇಳೆಗೆ ಚಿಕ್ಕನಹಳ್ಳಿ ಗ್ರಾಮ ತಲುಪಲಿದೆ.

