ಮೈಸೂರು:ಮೈಸೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದ್ದು,ಭಾನುವಾರ ಒಂದೇ ದಿನ 1,892 ಪ್ರಕರಣಗಳು ಪತ್ತೆಯಾಗಿದೆ.ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ 1,86,806 ಪ್ರಕರಣ ಕಾಣಿಸಿಕೊಂಡಿದ್ದು,1,78,844 ಮಂದಿ ಗುಣಮುಖರಾಗಿದ್ದಾರೆ.
ಈಗ 5,603 ಸಕ್ರಿಯ ಪ್ರಕರಣಗಳಿವೆ. ನಿನ್ನೆ 6,988 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು ಇನ್ನೂ ಹೆಚ್ಚು ಮಂದಿ ಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ.
ಜಿಲ್ಲೆಯಲ್ಲಿ 1ರಿಂದ5 ವರ್ಷದೊಳಗೆ 6, 6ರಿಂದ10 ವರ್ಷದೊಳಗೆ 20, 11ರಿಂದ17 ವರ್ಷದೊಳಗೆ 116 ಪ್ರಕರಣ ಸೇರಿದಂತೆ ಒಟ್ಟು 142 ಪ್ರಕರಣಗಳಿವೆ.
ಹೆಚ್.ಡಿ.ಕೋಟೆ 6, ಕೆ.ಆರ್.ನಗರ 4, ಮೈಸೂರು ನಗರ 92, ಮೈಸೂರು ತಾಲೂಕು 4, ನಂಜನಗೂಡು 7, ತಿ.ನರಸೀಪುರದಲ್ಲಿ 29 ಪ್ರಕರಣ ಸೇರಿದಂತೆ 142 ಮಕ್ಕಳಿಗೆ ಸೋಂಕು ತಗುಲಿದೆ.
ಗ್ರಾಮೀಣ ಪ್ರದೇಶಗಳಾದ ಹೆಚ್.ಡಿ.ಕೋಟೆ 45, ಹುಣಸೂರು 51, ಕೆ.ಆರ್.ನಗರ 37, ಮೈಸೂರು ತಾಲೂಕು 68, ಮೈಸೂರು ನಗರ 1,487, ನಂಜನಗೂಡು 52, ಪಿರಿಯಾಪಟ್ಟಣ 33, ಸಾಲಿಗ್ರಾಮ 1, ಸರಗೂರು 3, ತಿ.ನರಸೀಪುರ 115 ಸೇರದಂತೆ ಒಟ್ಟು 1,892 ಪ್ರಕರಣ ದಾಖಲಾಗಿದೆ.
ಮೈಸೂರು ಜಿಲ್ಲೆಯಲ್ಲಿ 12,461 ಮಂದಿ ಸೋಂಕಿತರು ವೈದ್ಯರ ಸಲಹೆ ಮೇರೆಗೆ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ 170, ಖಾಸಗಿ ಆಸ್ಪತ್ರೆಯಲ್ಲಿ 64 ಮಂದಿ ಹಾಗೂ ವೈದ್ಯರ ಸಲಹೆ ಮೇರೆಗೆ 116 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಬ್ಬರು ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ 2,435 ಮಂದಿ ಕೊರೊನ ದಿಂದ ಮೃತಪಟ್ಟಿದ್ದಾರೆ.

