ಮೈಸೂರು: ಮೈಸೂರಿನ ಅಗ್ರಹಾರದಲ್ಲಿರುವ ಪ್ರತಿಷ್ಠಿತ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರ ವಿರುದ್ಧ ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಾರೆ.
ಈ ಬ್ಯಾಂಕ್ ನ ಅಧ್ಯಕ್ಷರಾದ ತಾಯೂರು ವಿಠಲಮೂರ್ತಿರವರು ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸ್ಪಂದಿಸದೆ ಸಹಕಾರ ನೀಡದೆ ಇರುವುದರಿಂದ ಅವರ ಮೇಲೆ ಬ್ಯಾಂಕ್ ನ ಉಪಾಧ್ಯಕ್ಷರೂ ಸೇರಿದಂತೆ ಎಲ್ಲ ನಿರ್ದೇಶಕರು ಅಧ್ಯಕ್ಷರ ಸ್ಥಾನದಿಂದ ಕೂಡಲೇ ಇಳಿಯಬೇಕೆಂದು ಆಗ್ರಹಿಸಿದ್ದಾರೆ.
ಆಡಳಿತ ಮಂಡಳಿಯ ಸದಸ್ಯರುಗಳಾದ ನಮಗೆ ವಿಶ್ವಾಸವಿಲ್ಲದೆ ಇರುವುದರಿಂದ ಹಾಗೂ ಆಯ್ಕೆಯಾಗಿ 28ತಿಂಗಳು ಪೂರ್ಣಗೊಂಡಿರುವುದರಿಂದ
ಬ್ಯಾಂಕಿನ ಅಧ್ಯಕ್ಷರಾದ ತಾಯೂರು ವಿಠಲಮೂರ್ತಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಲು ಎಲ್ಲಾ ನಿರ್ದೇಶಕರು ತೀರ್ಮಾನಿಸಿದ್ದಾರೆ.
ಈ ಬಗ್ಗೆ ಬ್ಯಾಂಕ್ ನ ಪ್ರಭಾರಿ ವ್ಯವಸ್ಥಾಪಕರದ ಅನಂತ್ ವೀರಪ್ಪ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕ್ ನ ಉಪಾಧ್ಯಕ್ಷ ಬಸವರಾಜ್ (ಬಸಪ್ಪ ),ನಿರ್ದೇಶಕರುಗಳಾದ ಸಿದ್ದಪ್ಪ ಎಂ. ಡಿ. ಪಾರ್ಥಸಾರಥಿ, ನವೀನ್ ಕುಮಾರ್, ಎಚ್. ವಿ. ಭಾಸ್ಕರ್, ಅರುಣ್ ,ಪ್ರತಿಧ್ವನಿ ಪ್ರಸಾದ್ ಇನ್ನಿತರರು ಹಾಜರಿದ್ದರು.

