ಮೈಸೂರು: ವಿವಾಹಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಅತ್ಯಾಚಾರದ ನಂತರ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ನಂಜನಗೂಡು ತಾಲೂಕಿನ ಮಸಗೆ ಗ್ರಾಮದ ಕಾಲುವೆ ಸಮೀಪದ ಜಮೀನಿನಲ್ಲಿ ಮಹಿಳೆಯ ಶವ ಪತ್ತೆ ಆಗಿದೆ.
ಮೃತ ಮಹಿಳೆಯನ್ನು ಕಳಲೆ ಗ್ರಾಮದ ನಾಗರಾಜು ಪತ್ನಿ ಸಿದ್ದಮ್ಮ(45) ಎಂದು ಗುರುತಿಸಲಾಗಿದೆ.
ಮೃತಳ ತಾಯಿ ನಾಗಮ್ಮ ನಂಜನಗೂಡು ಗ್ರಾಮಾಂತರ ಠಾಣೆಗೆ ದೂರು ನೀಡಿ, ಭಾನುವಾರ ರಾತ್ರಿ ಸಿದ್ದಮ್ಮ ಮನೆಯಿಂದ ಹೊರಹೋಗಿದ್ದು, ಸೋಮವಾರ ಮೃತದೇಹ ಪತ್ತೆಯಾಗಿದೆ. ನನ್ನ ಮಗಳನ್ನು ದುಷ್ಕರ್ಮಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆಂದು ತಿಳಿಸಿದ್ದಾರೆ.
ನಂಜನಗೂಡು ಗ್ರಾಮಾಂತರ ಠಾಣೆಯ ಪೆÇಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

