ಮೈಸೂರು: ರಾಯಚೂರಿನಲ್ಲಿ ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಭಾವಚಿತ್ರ ಇಡಲು ಒಪ್ಪದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರ ನಡೆ ಖಂಡಿಸಿ
ಅಶೋಕಪುರಂನ ಚಿಕ್ಕಗರಡಿ ಯುವಕರ ಸಂಘ,ಕೃಷ್ಣರಾಜ ಯುವಬಳಗದ ವತಿಯಿಂದ ಮಾನವ ಸರಪಳಿ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಮೈಸೂರಿನ ಸಿಲ್ಕ್ ಫ್ಯಾಕ್ಟರಿ ವೃತ್ತದಲ್ಲಿ ಮಲ್ಲಿಕಾರ್ಜುನ ಗೌಡರನ್ನು ನ್ಯಾಯಾಧೀಶ ಹುದ್ದೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ರಸ್ತೆ ತಡೆದು ಮಾನವ ಸರಪಳಿ ಮಾಡಿ ನ್ಯಾಯಾಧೀಶರ ವಿರುದ್ಧ ಘೋಷಣೆ ಕೂಗಲಾಯಿತು.
ಈ ವೇಳೆ ಮಾತನಾಡಿದ ಕೃಷ್ಣರಾಜ ಯುವಬಳಗದ ಅಧ್ಯಕ್ಷ ನವೀನ್ ಕೆಂಪಿ
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆಗೆಯುವಂತೆ ಪಟ್ಟು ಹಿಡಿದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರ ನಡೆ ಖಂಡನೀಯ. ನ್ಯಾಯಾಧೀಶ ಹುದ್ದೆಯಿಂದ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ದೇಶದ ಎಲ್ಲ ವರ್ಗದ ಜನರು ಸ್ವಾಭಿಮಾನ, ಸಮಾನತೆಯಿಂದ ಬದುಕಲೆಂಬ ಕಾರಣಕ್ಕೆ ಸಂವಿಧಾನ ರಚನೆಗೆ ಅಂಬೇಡ್ಕರ್ ತಮ್ಮ ಜೀವವನ್ನೇ ಸವೆಸಿದ್ದಾರೆ. ತಳ ಸಮುದಾಯದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ್ದಾರೆ. ದುರಂತವೆಂದರೆ, ಅಂಬೇಡ್ಕರ್ ರಚಿಸಿದ ಸಂವಿಧಾನವನ್ನೇ ಓದಿ ನ್ಯಾಯಾಧೀಶ ಹುದ್ದೆಯಲ್ಲಿರುವ ಮಲ್ಲಿಕಾರ್ಜುನಗೌಡ ತಮ್ಮ ವೃತ್ತಿ ಗೌರವಕ್ಕೆ ಮತ್ತು ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ಹೀಗಾಗಿ ಅವರು ಆ ಪೀಠದಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ ಎಂದು ತಿಳಿಸಿದರು.
ವಕೀಲರಾದ ಪರಂಜ್ಯೋತಿ ಪ್ರತಾಪ್ , ಜವರಯ್ಯ, ಆದರ್ಶ,ಬೀಮ್ ಪ್ರಸಾದ್, ಶ್ರೀನಿವಾಸ್ ,ಸಂದೀಪ್, ಅರ್ಜುನ್ .ಎನ್, ಬಿ ನರೇಂದ್ರ, ಸತ್ಯರಾಜ್, ಮಂಚಿ ಮೋಹನ್, ಯೋಗ, ಕಾಂಗ್ರೆಸ್ ಯುವ ಮುಖಂಡರಾದ ಮದನ್, ಕೆ. ಆರ್. ಕ್ಷೇತ್ರದ ಬಿಜೆಪಿ ಮುಖಂಡ ಪುನೀತ್ , ಕೆ. ಆರ್. ಬ್ಯಾಂಕಿನ ಉಪಾಧ್ಯಕ್ಷ ಬಸವರಾಜ ಬಸಪ್ಪ ,ಹಾಗೂ ಚಿಕ್ಕಗರಡಿ ಯುವಕರ ಸಂಘದ ಸದಸ್ಯರು ಮತ್ತು ಅಶೋಕಪುರಂ ಜನತೆ ಪಾಲ್ಗೊಂಡಿದ್ದರು.

