ಮೈಸೂರು:ರಕ್ತದ ಕೊರತೆ ಯಾರಿಗೂ ಆಗಬಾರದು ಎಂಬ ಸದುದ್ದೇಶದಿಂದ ದೇಶಾದ್ಯಂತ ಪಾದಯಾತ್ರೆ ಆರಂಭಿಸಿದ್ದೇನೆ
ಎಂದು ದೆಹಲಿಯ ನಿವಾಸಿ ಸಾಮಾಜಿಕ ಕಾರ್ಯಕರ್ತ ಕಿರಣ್ ವರ್ಮಾ ತಿಳಿಸಿದರು.
ದೇಶ್ಯಾದ್ಯಂತ ರಕ್ತದಾನ ಅರಿವು ಮೂಡಿಸಲು ದೇಶ ಪರ್ಯಟನೆ ಆರಂಭಿಸಿರುವ ಕಿರಣ್ ವರ್ಮಾ ಅವರಿಗೆ ಜೀವಧಾರ ರಕ್ತನಿಧಿ ಕೇಂದ್ರದ ವತಿಯಿಂದ ಸನ್ಮಾನಿಸಿ ಅಭಿನಂದಿಸಿದ ವೇಳೆ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಳೆದ ವರ್ಷ ಡಿಸೆಂಬರ್ 28ರಂದು ತ್ರಿವೇಂಡ್ರಂನಿಂದ ಪಾದಯಾತ್ರೆ ಆರಂಭಿಸಿ ಸುಮಾರು ಸಾವಿರಕ್ಕೂ ಹೆಚ್ಚು
ಕಿ. ಮೀ ಸಂಚರಿಸಿದ್ದೇನೆ ಎಂದು ಹೇಳಿದರು.
ಎಲ್ಲ ಜಿಲ್ಲೆಗಳಲ್ಲಿ ಬ್ಲಡ್ ಡೊನೇಟ್ ಕ್ಯಾಂಪ್ ನಡೆಸುವ ಸಂಸ್ಥೆಗಳನ್ನು ಸಂಪರ್ಕಿಸಿ ರಕ್ತದಾನ ಶಿಬಿರ ಕೂಡ ನಡೆಸಿದ್ದೇನೆ, ಹೀಗೆ ಹೋದಲ್ಲೆಲ್ಲಾ ರಕ್ತದಾನ ಅರಿವು ಮೂಡಿಸಿ ಪ್ರತಿ ಜಿಲ್ಲೆಯಲ್ಲಿ ರಕ್ತ ಸಂಗ್ರಹ ಹೆಚ್ಚು ಮಾಡುವುದರ ಮೂಲಕ ರಕ್ತದ ಲಭ್ಯತೆ ಆಗಬೇಕೆನ್ನುವ ಉದ್ದೇಶವಿಟ್ಟುಕೊಂಡಿದ್ದೇನೆ ಎಂದು ತಿಳಿಸಿದರು.
ರಕ್ತದ ಕೊರತೆ ಯಾರಿಗೂ ಆಗಬಾರದು ಎಂಬ ಸದುದ್ದೇಶದಿಂದ ಪಾದಯಾತ್ರೆ ಆರಂಭಿಸಿದ್ದೇನೆ 21ಸಾವಿರ ಕಿಲೋ ಮೀಟರ್ ಕ್ರಮಿಸುವ ಗುರಿ ಇಟ್ಟುಕೊಂಡಿದ್ದೇನೆ ಈಗಾಗಲೇ ತ್ರಿವೇಂಡ್ರಂ, ಕೊಲ್ಲಂ, ಏರ್ನಾಕುಲಂ, ತ್ರಿಶೂರ್, ಮಲಪುರಂ, ಕೋಜಿಕೋಡ್ , ಮಾಹೆ, ಕಣ್ಣೂರು, ಕಾಸರಗೋಡು, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಬೆಂಗಳೂರು , ಮಂಡ್ಯ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಸಂಚರಿಸಿದ್ದೇನೆ ಎಂದರು.
800ಕ್ಕೂ ಹೆಚ್ಚು ಕಿ .ಮೀ ಪಾದಯಾತ್ರೆ ಮೂಲಕ ಮೈಸೂರಿಗೆ ಬಂದಿದ್ದೇನೆ ,ಇಲ್ಲಿಂದ ತಮಿಳುನಾಡು ಕೊಯಮತ್ತೂರು ಮಧುರೈಗೆ ಹೋಗುತ್ತೇನೆ.
2025 ಡಿ.31ರ ವೇಳೆಗೆ ದೇಶದ ಯಾರೊಬ್ಬರೂ ರಕ್ತದ ಕೊರತೆಯಿಂದ ಸಾಯಬಾರದು ಎಂಬ ಆಶಯದೊಂದಿಗೆ ಅರಿವು ಮೂಡಿಸುವ ಕಾರ್ಯ ಮುಂದುವರಿಸಿಕೊಂಡು ಹೋಗುತ್ತೇನೆ ನನ್ನ ಜೀವಕ್ಕೆ ತೊಂದರೆ ಆದರೂ ಚಿಂತೆಯಿಲ್ಲ ಜನಸಾಮಾನ್ಯರು ರಕ್ತದ ಕೊರತೆಯಿಂದ ಪರದಾಡಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ಹಾಗೂ ಮುತ್ತಣ್ಣ , ಬ್ಲಡ್ ಆನ್ ಕಾಲ್ ಕ್ಲಬ್ ಸಂಸ್ಥಾಪಕರಾದ ದೇವೇಂದ್ರ ಪರಿಹಾರಿಯಾ,ಆದಿತ್ಯ ,ಗಣೇಶ್ ಭಾವಸಾರ್ ,ಸದಾಶಿವ್ ,ಚಂದ್ರು , ಕೇಬಲ್ ವಿಜಿ ,ಸೂರಜ್ ಹಾಗೂ ಇನ್ನಿತರರು ಹಾಜರಿದ್ದರು.

