ಮೈಸೂರು: ಮೈಸೂರು ನಗರದ ಬಿಜೆಪಿ ಕಾರ್ಯಲಯದಲ್ಲಿ ಸಂತ ಶ್ರೇಷ್ಠ ಕವಿ ರವಿದಾಸ್ ಜೀ ಅವರ 572 ನೇ ಜಯಂತಿ ಯನ್ನು ವಿಶೇಷವಾಗಿ ಆಚರಿಸಲಾಯಿತು.
ಈ ವೇಳೆ ಬಿಜೆಪಿ ಎಸ್ಸಿ ಮೊರ್ಚಾ ರಾಜ್ಯ ಕಾರ್ಯದರ್ಶಿ ಪರಮಾನಂದ ಮಾತನಾಡಿ, ರವಿದಾಸ್ ಅಥವಾ ರೈದಾಸ್ ಅವರು15 ರಿಂದ 16 ನೇ ಶತಮಾನದ ಅವಧಿಯಲ್ಲಿ ಭಕ್ತಿ ಚಳವಳಿಯ ಭಾರತೀಯ ಅತೀಂದ್ರಿಯ ಕವಿ-ಸಂತರಾಗಿದ್ದರು ಎಂದು ಸ್ಮರಿಸಿದರು.
ಉತ್ತರ ಭಾರತದ ಬಸವಣ್ಣ ರವಿದಾಸ್ ಜೀ ಎಂದು ಬಣ್ಣಿಸಿದರು
ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್ ಮತ್ತು ಹರಿಯಾಣದ ಆಧುನಿಕ ಪ್ರದೇಶಗಳಲ್ಲಿ ಅವರು ಗುರು (ಶಿಕ್ಷಕ)ವಾಗಿ ಪೂಜಿಸಲ್ಪಟ್ಟರು.
ಕವಿ, ಸಮಾಜ ಸುಧಾರಕ ಮತ್ತು ಆಧ್ಯಾತ್ಮಿಕ ವ್ಯಕ್ತಿಯಾಗಿದ್ದರು..
ರವಿದಾಸ್ ಅವರ ಜೀವನ ವಿವರಗಳು ಅನಿಶ್ಚಿತ ಮತ್ತು ವಿವಾದಾತ್ಮಕವಾಗಿವೆ. ಅವರು 1450 ನಲ್ಲಿ ಜನಿಸಿದರು ಎಂದು ವಿದ್ವಾಂಸರು ನಂಬುತ್ತಾರೆ.
ರವಿದಾಸ್ ಅವರ ಭಕ್ತಿ ಪದ್ಯಗಳನ್ನು ಗುರು ಗ್ರಂಥ ಸಾಹಿಬ್ ಎಂದು ಕರೆಯಲ್ಪಡುವ ಸಿಖ್ ಗ್ರಂಥಗಳಲ್ಲಿ ಸೇರಿಸಲಾಗಿದೆ.
ಹಿಂದೂ ಧರ್ಮದೊಳಗಿನ ದಾದು ಪಂಥಿ ಸಂಪ್ರದಾಯದ ಪಂಚವಾಣಿ ಪಠ್ಯವು ರವಿದಾಸ್ ಅವರ ಹಲವಾರು ಕವಿತೆಗಳನ್ನು ಒಳಗೊಂಡಿದೆ ಎಂದು ಅವರು ತಿಳಿಸಿದರು.
ಗುರು ರವಿದಾಸ್ ಅವರನ್ನು ಗುರು ರೈದಾಸ್ ಎಂದೂ ಕರೆಯಲಾಗುತ್ತಿತ್ತು. ಅವರು ಈಗಿನ ಭಾರತದ ಉತ್ತರ ಪ್ರದೇಶದ ವಾರಣಾಸಿ ಬಳಿಯ ಸರ್ ಗೋಬರ್ಧನ್ ಗ್ರಾಮದಲ್ಲಿ ಜನಿಸಿದರು. ಮಾತಾ ಕಲ್ಸಾನ್ ಅವರ ತಾಯಿ, ಮತ್ತು ಅವರ ತಂದೆ ಸಂತೋಖ್ ದಾಸ್ ಎಂದು ಅವರು ಹೇಳಿದರು.
ಅವರ ಪೋಷಕರು ಚರ್ಮದ ಕೆಲಸ ಮಾಡುವ ಚಾಮರ್ ಸಮುದಾಯಕ್ಕೆ ಸೇರಿದವರು, ಅವರ ಮೂಲ ಉದ್ಯೋಗ ಚರ್ಮದ ಕೆಲಸವಾಗಿದ್ದರೂ, ಅವರು ತಮ್ಮ ಹೆಚ್ಚಿನ ಸಮಯವನ್ನು ಗಂಗಾನದಿಯ ದಡದಲ್ಲಿ ಆಧ್ಯಾತ್ಮಿಕ ಅನ್ವೇಷಣೆಗಳಲ್ಲಿ ಕಳೆಯುತ್ತಿದ್ದರು ಎಂದು ವಿವರಿಸಿದರು.
ನಗರ ಎಸ್ ಸಿ ಮೋರ್ಚಾ ಅಧ್ಯಕ್ಷ ಈಶ್ವರ್, ಗ್ರಾಮಾಂತರ ಎಸ್ ಸಿ ಮೋರ್ಚಾ ಅಧ್ಯಕ್ಷ ಸಿ. ಎಂ. ಮಹಾದೇವಯ್ಯ, ಎಸ್ ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಯರಾಮ್, ನರಸಿಂಹಮೂರ್ತಿ, ಕೃಷ್ಣಮೂರ್ತಿ, ಓ ಬಿ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಜೋಗಿ ಮಂಜು, ಮಹಾನಗರ ಪಾಲಿಕೆ ಸದಸ್ಯರಾದ ರಮೇಶ್,ಬಿಲ್ಲಯ್ಯ,ಸೋಮಶೇಖರ್, ಅನಿಲ್ ಮತ್ತು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

