ದೇಶಪ್ರೇಮ – ಪುಲ್ವಾಮಾ ದಾಳಿ ಕರಾಳ ದಿನ ಆಚರಿಸಿದ ಯುವ ಭಾರತ ಸಂಘಟನೆ

ಮೈಸೂರು: ಮೈಸೂರಿನ ಯುವ ಭಾರತ ಸಂಘಟನೆ ವತಿಯಿಂದ  ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ

ದೇಶಪ್ರೇಮ ದಿನ ಮತ್ತು ಪುಲ್ವಾಮಾ ದಾಳಿ ಕರಾಳ ದಿನವನ್ನು ಆಚರಿಸಲಾಯಿತು.

ಈ ವೇಳೆ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಭಾವಚಿತ್ರ ಹಿಡಿದು ಅವರ ತ್ಯಾಗ ಬಲಿದಾನವನ್ನು ಸ್ಮರಿಸಲಾಯಿತು.

ಪ್ರೇಮಿಗಳ ದಿನಾಚರಣೆಗೆ ಧಿಕ್ಕಾರ,ವಿಶ್ವ ದೇಶಪ್ರೇಮಿಗಳಿಗೆ ಜಯವಾಗಲಿ,ಭಾರತ್ ಮಾತಾಕಿ ಜೈ, ವಂದೇ ಮಾತರಂ,ವೀರ ಯೋಧರು ಅಮರರಾಗಲಿ,ಸೈನಿಕರ ದಿನಾಚರಣೆಗೆ ಜಯವಾಗಲಿ ಎಂಬ ಘೋಷಣೆಗಳನ್ನು ಹೋಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದುದು ವಿಶೇಷವಾಗಿತ್ತು.

ಈ ವೇಳೆ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ,ಪ್ರೇಮ ದಿನಾಚರಣೆ ನಮ್ಮ  ಸಂಸ್ಕೃತಿಯಲ್ಲ. ಪ್ರೀತಿ ಪ್ರೇಮ ಎನ್ನುವುದು ತಂದೆ -ತಾಯಿ,ಗುರು- ಹಿರಿಯರು,ದೇಶದ ಬೆನ್ನಲುಬಾದ ಸೈನಿಕರು ಮತ್ತು ರೈತರ ಮೇಲೆ ಇರಬೇಕು.ಅರ್ಥವಿಲ್ಲದ ಪ್ರೇಮಿಗಳ ದಿನಾಚರಣೆ ಸಲ್ಲದು ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಯಶಸ್ವಿನಿ ಸೋಮಶೇಖರ್ ಮಾತನಾಡಿ, ನಿರಂತರವಾಗಿ ಕಳೆದ ಐದು ವರ್ಷಗಳಲ್ಲಿ ಇದು ಐದನೇಯ ಕರಾಳ ಘಟನೆ. ೨೦೦೬ ಸೆಪ್ಟೆಂಬರ್ ೧೮ ರಂದು ನಮ್ಮ ಸೈನಿಕರು ನಿದ್ರೆಯಲ್ಲಿರುವಾಗ ಉಗ್ರರು ದಾಳಿ ನಡೆಸಿ ಕೊಂದಿರುವ ಕರಾಳ ಘಟನೆಯ ಕ್ರೌರ್ಯ ನೆನಪು ಮಾಸುವ ಮುನ್ನವೇ ಈ ದುಷ್ಕೃತ್ಯ ನಡೆದಿರುವುದು ಇನ್ನಷ್ಟು ಆತಂಕಕ್ಕೀಡುಮಾಡಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ವೈ. ಡಿ. ರಾಜಣ್ಣ ಮಾತನಾಡಿ ತಮ್ಮ ಜೀವ ಒತ್ತೆ ಇಟ್ಟು ದೇಶದ ರಕ್ಷಣೆ ಮಾಡುತ್ತಿರುವ ಸೈನಿಕರ ಮೇಲೆ ಈ ರೀತಿಯ ದುಷ್ಕೃತ್ಯ ನಡೆಸಿರುವ ಸಂಘಟನೆಗೆ ಪಾಕಿಸ್ತಾನ ನಿರಂತರವಾಗಿ ಕುಮ್ಮಕ್ಕನ್ನು ಕೊಡುತ್ತಿದೆ ಎಂದು ಕಿಡಿ ಕಾರಿದರು.

ನಗರ ಪಾಲಿಕಾ ಸದಸ್ಯರಾದ ಪ್ರಮೀಳಾ ಭರತ್ ಮಾತನಾಡಿ, ಭಾರತ ಪಾಕಿಸ್ತಾನವನ್ನು ಪರಮಾಪ್ತ ದೇಶ ಅಲ್ಲ ಎಂಬ ರೀತಿಯಲ್ಲಿ ಇಡೀ ಜಗತ್ತಿಗೆ ಸಾರಿ ಹೇಳಿದೆ. ಉರಿಯಲ್ಲಿ ನಡೆದಂತಹ ಭಯೋತ್ಪಾದನ ದಾಳಿಗೆ ಸೈನ್ಯ ಹೇಗೆ ಉತ್ತರ ಕೊಟ್ಟಿತೋ ಅದೇ ರೀತಿಯ ಉತ್ತರವನ್ನು ಕೊಡಲು ನಮ್ಮ ಸೇನೆ ಸಶಕ್ತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಗರ ಪಾಲಿಕೆ ನಾಮ ನಿರ್ದೇಶಿತರಾದ ಜಗದೀಶ್ ,ಮುಡಾ ಸದಸ್ಯರಾದ ಲಕ್ಷ್ಮೀದೇವಿ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮೈಸೂರು ನಗರ ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ಜೋಗಿ ಮಂಜು ,ಬಿಜೆಪಿ ಚಾಮರಾಜ ಯುವ ಮೋರ್ಚಾ ಅಧ್ಯಕ್ಷ ಸಚಿನ್ ,ಎನ್. ಆರ್. ಯುವಮೋರ್ಚಾ  ಅಧ್ಯಕ್ಷ ಲೋಹಿತ್,ವಿಕ್ರಂ ಅಯ್ಯಂಗಾರ್,ಅಜಯ್ ಶಾಸ್ತ್ರಿ,ಶರತ್,ಪ್ರಶಾಂತ್, ರಂಗನಾಥ್,ಸುಚೀಂದ್ರ ,ಚರಣ್, ಲಿಂಗರಾಜು,ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾ ಉಪಾಧ್ಯಕ್ಷ ಸೂರಜ್,ಚಕ್ರಪಾಣಿ ಇನ್ನಿತರರು ಹಾಜರಿದ್ದರು