ಬೆಂಗಳೂರು: ಹಿಜಬ್ ವಿವಾದದ ಸಂಬಂಧ ಹೈಕೋರ್ಟ್ ಪೂರ್ಣ ಪೀಠದಲ್ಲಿ ಮತ್ತೆ ವಿಚಾರಣೆ ಪ್ರಾರಂಭವಾಗಿದ್ದು,ಬುಧವಾರಕ್ಕೆ ಮುಂದೂಡಲಾಯಿತು.
ಮೊದಲಿಗೆ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು ವಾದ ಪ್ರಾರಂಭಿಸಿದರು.
ತರಗತಿಗಳಿಗೆ ಹಿಜಬ್ ಬೇಡ ತರಗತಿಯ ನಂತರ ಹೊರಗೆ ಹಿಜಬ್ ಧರಿಸಿಕೊಳ್ಳಲಿ ಎಂದು ಹೇಳಿದರು.
ಪ್ರಾನ್ಸ್ ದೇಶದಲ್ಲಿ ಹಿಜಬ್ ನಿರ್ಬಂಧವಿದೆ ಎಂದು ನಾವಡಗಿ ಹೇಳಿದಾಗ ಸಿಜೆ ಮಧ್ಯ ಪ್ರವೇಶಿಸಿ ಪ್ರಾನ್ಸ್ ನ ಸಂವಿಧಾನಕ್ಕೂ ನಮ್ಮ ದೇಶದ ಸಂವಿಧಾನಕ್ಕೂ ವ್ಯತ್ಯಾಸವಿದೆ ಎಂದು ಹೇಳಿದರು.
ಹಿಜಬ್ ಇಲ್ಲದೆಯೂ ಇಸ್ಲಾಂಗೆ ಅಸ್ತಿತ್ವವಿದೆ ಅದಕ್ಕಾಗಿ ಪ್ರಾನ್ಸ್ ಉದಾಹರಣೆ ಕೊಟ್ಟಿದ್ದೇನೆ ಅಷ್ಟೆ ಎಂದು ಎಜಿ ತಿಳಿಸಿದರು.
ಮಸೀದಿ ಇಲ್ಲದೆಯೂ ನಮಾಜ್ ಮಾಡಬಹುದು ಎಂದು ಕೋರ್ಟ್ ಹೇಳಿದೆ ಎಂದು ನಾವಡಗಿ ಸುಪ್ರೀಮ್ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದರು.
ಹಾಗೆಯೇ ಹಿಜಬ್ ಇಲ್ಲದೆಯೂ ಇಸ್ಲಾಮ್ ಧರ್ಮಕ್ಕೆ ಅಸ್ತಿತ್ವವಿದೆ ಎಂದು ಹೇಳಿದರಲ್ಲದೆ ನಾನು ಖುರಾನ್ ತಜ್ಞ ಅಲ್ಲ ಆದರೆ ಇದರ ಇಂಗ್ಲಿಷ್ ತರ್ಜುಮೆ ಆಧರಿಸಿ ವಾದ ಮಂಡಿಸುತ್ತೇನೆ ಎಂದು ನಾವಡಗಿ ತಿಳಿಸಿದರು.
ಸುಪ್ರೀಂ ಕೋರ್ಟ್ ಎರಡು ಖುರಾನ್ ಇಂಗ್ಲಿಷ್ ತರ್ಜುಮೆ ಪುಸ್ತಕಗಳನ್ನು ಪರಿಗಣಿಸಿದೆ,ಹಾಗೆಯೆ ಎರಡೂ ಪುಸ್ತಕಗಳು ಹೈಕೋರ್ಟ್ ಗೆ ಸಲ್ಲಿಸುತ್ತೇನೆ ಎಂದು ತಿಳಿಸಿ ಅವುಗಳನ್ನು ಹೈಕೋರ್ಟ್ ಹೆ ಎಜಿ ಸಲ್ಲಿಸಿದರು.
ಹೈಕೋರ್ಟ್ ಪೂರ್ಣ ಪೀಠ ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.

