ಹುಬ್ಬಳ್ಳಿ: ಹಿರಿಯ ಪೊಲೀಸ್ ಅಧಿಕಾರಿಗಳ ವರದಿ ಆಧರಿಸಿ ಎಸ್ ಡಿ ಪಿ ಐ ಪಿಎಫ್ ಐ, ಸಿಎಫ್ ಐ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಎಲ್ಲ ಘಟನೆಗಳನ್ನ ಹಿರಿಯ ಪೊಲೀಸ್ ಅಧಿಕಾರಿಗಳು ಬಹಳ ಕೂಲಂಕುಷವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ನಡೆದ ಹಲವಾರು ಘಟನೆಗಳ ಮೇಲೆ ಗಮನ ಹರಿಸಲಾಗುತಗತಿದೆ. ವಿಶೇಷವಾಗಿ ಕರಾವಳಿ ಪ್ರದೇಶದಲ್ಲಿ ಶಾಂತಿ ಕದಡುವುದು ನಡೆದಿದೆ
ಮತೀಯ ದ್ವೇಷ ಬಿತ್ತುವಂಥದ್ದನ್ನ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದರು.
ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಅವರ ವರದಿಯ ಆಧಾರದ ಮೇಲೆ ಬರುವಂತಹ ದಿನದಲ್ಲಿ ಎಸ್ ಡಿ ಪಿ ಐ ಪಿಎಫ್ ಐ, ಸಿಎಫ್ ಐ ನಿಷೇಧದ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.
ಬಜೆಟ್ ಮಾ. 4 ರಂದು ಮಂಡನೆಯಾಗುತ್ತದೆ. ಎಲ್ಲೆಲ್ಲಿ ಯಾವ ಪ್ರದೇಶಕ್ಕೆ ಏನು ಸಿಗುತ್ತೋ ಅಂದೇ ಗೊತ್ತಾಗುತ್ತೆ
ಬಿಜೆಟ್ ನಲ್ಲಿ ಏನಿದೆ ಅನ್ನೋದನ್ನ ಈಗಲೇ ಹೇಳೋದು ತಪ್ಪಾಗುತ್ತೆ. ಅದರ ಬಗ್ಗೆ 4ರಂದು ನೋಡಿ ಎಂದರು.
ಕಾಂಗ್ರೆಸ್ 2ನೇ ಹಂತದ ಮೇಕೆದಾಟು ಹೋರಾಟಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿ, ಅದು ರಾಜಕೀಯ ಪಾದಯಾತ್ರೆ.
ಅವರು ಮೊದಲು ಮಾಡಿದ್ದು ಅದನ್ನೇ, ಈಗ ಮಾಡ್ತಿರೋದು ಅದನ್ನೇ. ಅವರ ಕಾಲದಲ್ಲಿ ಡಿಪಿಎಆರ್ ಸಿದ್ಧಪಡಿಸಲು 5 ವರ್ಷ ತೆಗೆದುಕೊಂಡಿದ್ದರು. ಕುಮಾರಸ್ವಾಮಿ ಬಂದಮೇಲೆ ಡಿಪಿಎಆರ್ ಸಿದ್ಧವಾಯ್ತು. ಯಾವ ನೈತಿಕ ಆಧಾರದ ಮೇಲೆ ಪಾದಯಾತ್ರೆ ಮಾಡ್ತಾರೆ ಎಂದು ಬೊಮ್ಮಾಯಿ ಪ್ರಶ್ನೆ ಮಾಡಿದರು.

