ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಶ್ರೀ ರಾಮ ತರಂಗಿಣಿ ಹಾಗೂ ಶಿವರಾತ್ರಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ವಿದ್ಯಾರಣ್ಯಪುರಂ ನ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮ ಪಾದುಕೆಗೆ ವಿಶೇಷ ಪೂಜೆ ನೆರವೇರಿಸಿ ಅಲ್ಲಿಂದ ವಿದ್ಯಾರಣ್ಯಪುರಂ ನ ಪಾರ್ಕ್ ಗೆ ಅದ್ದೂರಿ ಮೆರವಣಿಗೆಯೊಂದಿಗೆ ಶ್ರೀ ದತ್ತ ವಿಜಯಾನಂದ ಸ್ವಾಮೀಜಿ ಹಾಗೂ ಎಸ್.ಎ.ರಾಮದಾಸ್ ಅವರು ಹೊತ್ತು ತಂದರು.
ರಾಮಲಿಂಗೇಶ್ವರ ಪಾರ್ಕ್ ನಲ್ಲಿ ಸ್ಥಾಪಿಸಿದ್ದ ಶಿವಲಿಂಗಕ್ಕೆ ವಿಶೇಷ ಪೂಜೆಯನ್ನು ಸ್ವಾಮೀಜಿ ಅವರು ಹಾಗೂ ಶಾಸಕ ಎಸ್.ಎ.ರಾಮದಾಸ್ ಅವರು ನೆರವೇರಿಸಿದರು
ಗಣಪತಿ ಸಚ್ಚಿದಾನಂದ ಆಶ್ರಮದ ಪೂಜ್ಯ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ಸ್ವಾಮೀಜಿ ಅವರು ಮಾತನಾಡಿ ನಮ್ಮ ಗುರುಗಳಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರನ್ನು ಮನಸ್ಸಿನಲ್ಲಿ ಸ್ಮರಣ ಮಾಡಿಕೊಳ್ಳುತ್ತಾ ಶಿವರಾತ್ರಿ ಅಂದರೆ ನಮ್ಮೆಲ್ಲರಿಗೂ ಬಹಳ ಇಷ್ಟವಾದ ಒಂದು ಹಬ್ಬ ಮಹಾಪರ್ವ ಮಹಾಶಿವರಾತ್ರಿ ಅದರಲ್ಲೂ ನಮ್ಮ ಕರ್ನಾಟಕಕ್ಕೂ ಶಿವನಿಗೂ ಬಹಳ ಹತ್ತಿರದ ಸಂಬಂಧ ಇದೆ ಎಂದು ತಿಳಿಸಿದರು.
ಸೋಮವಾರ ಬರಲಿ ಶನಿವಾರ ಬರಲಿ ಅಮಾವಾಸ್ಯೆ ಆಗಲಿ ಹುಣ್ಣಿಮೆ ಆಗಲಿ ಎಲ್ಲಾ ಶಿವಾಲಯದಲ್ಲಿಯೂ ಭಕ್ತರು ಕೂಡಿರುತ್ತಾರೆ. ಪ್ರತಿ ತಿಂಗಳು ಮಹಾಶಿವರಾತ್ರಿ ಬರುತ್ತದೆ ಆದರೆ ಮಾಘಮಾಸದಲ್ಲಿ ಬರುವಂತಹ ಮಾಸ ಶಿವರಾತ್ರಿ ಮಹಾಶಿವರಾತ್ರಿ ಅತ್ಯಂತ ವಿಶೇಷವಾಗಿದೆ. ಈ ದಿನ ಒಂದು ಜಲಬಿಂದುವನ್ನು ಶಿವನಿಗೆ ಅರ್ಪಿಸಿದರೂ ಸಹ ಪುಣ್ಯ ದೊರಕುತ್ತದೆ ಎಂದು ತಿಳಿಸಿದರು.
ಪಂಡರಾಪುರದಲ್ಲಿ ಒಂದು ವಿಶೇಷವಾದಂತಹ ಚರಿತ್ರೆ ನಡೆಯಿತು ಒಂದು ಪಕ್ಷಿ ಒಂದು ಸಾಮಾನ್ಯವಾದ ಒಂದು ಚಿಕ್ಕ ನೀರು ಕುಡಿದು ಆಕಾಶದಲ್ಲಿ ಹಾರಾಟ ನಡೆಸುತ್ತಿರುವ ಸಂದರ್ಭದಲ್ಲಿ ಅದರ ರೆಕ್ಕೆಯಲ್ಲಿದ್ದ ನೀರಿನ ಹನಿ ಶಿವನ ಮೇಲೆ ಬೀಳುತ್ತದೆ ಆ ಪುಣ್ಯದಿಂದ ಪಕ್ಷಿ ಮರುಜನ್ಮದಲ್ಲಿ ಪಕ್ಷಿ ರಾಜನಾಗಿ ಜನಿಸುತ್ತಾನೆ ಎಂದು ಪ್ರತೀತಿ ಇದೆ.
ನಾವೆಲ್ಲರೂ ಮನುಷ್ಯರು ನಮಗೆ ಎಲ್ಲಾತರದ ಬುದ್ಧಿಯನ್ನು ಭಗವಂತ ಕೊಟ್ಟಿದ್ದಾನೆ. ನಾವು ಬುದ್ಧಿಯಿಂದ ಮನಸ್ಸಿಟ್ಟು ಸ್ವಾಮಿಯನ್ನು ಕೊಂಡಾಡಿದರೆ ಈ ದಿನ ಮಹಾಶಿವರಾತ್ರಿಯಲ್ಲಿ ಭಕ್ತಿಯಾಗಿ ಅರ್ಚನೆ ಮಾಡಿದರೆ ನಮಗೆ ಎಲ್ಲವನ್ನೂ ಶಿವ ಕೊಡುತ್ತಾನೆ ಎಂದು ಶ್ರೀಗಳು ತಿಳಿಸಿದರು.
ಶಿವರಾತ್ರಿಯಲ್ಲಿ ನಮ್ಮ ಮೈಸೂರಿನಲ್ಲಿ ಜಾಗರಣ ಮಾಡಿಸಬೇಕು ಎಂದು ಈ ಪಾರ್ಕ್ ನಲ್ಲಿ ರಾಮದಾಸ ರವರು ಈ ಕಾರ್ಯಕ್ರಮ ಆಯೋಜನೆ ಮಾಡಿರುವುದು ತುಂಬಾ ಸಂತೋಷ ತಂದಿದೆ. ಜೊತೆಗೆ ಅಯೋಧ್ಯೆಗೆ ಹೋಗುವಂತ ರಾಮ ಪಾದುಕೆಗಳು ಇವತ್ತು ನಮ್ಮ ಮೈಸೂರಿಗೆ ಬಂದಿದೆ. ಮೈಸೂರಿನಲ್ಲಿ 25000 ಮನೆಗಳಿಗೆ ರಾಮ ಪಾದುಕೆಗಳನ್ನು ತೆಗೆದುಕೊಂಡು ಹೋಗಬೇಕು ಎಂದು ರಾಮದಾಸ್ ಅವರು ಸಂಕಲ್ಪ ಮಾಡಿದ್ದಾರೆ. ಎಲ್ಲರ ಮನೆಗೂ ರಾಮನ ಪಾದುಕೆ ತೆರಳುತ್ತಿದೆ ಎಂದರೆ ಅದು ಅತ್ಯಂತ ಪುಣ್ಯದ ಕೆಲಸವಾಗಿದೆ ಎಂದರು.
ರಾಮ ಶಿವರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಎಲ್ಲಾ ಭಕ್ತಾದಿಗಳಿಗೂ ಶಿವನ ಪರಿಪೂರ್ಣವಾದ ಅನುಗ್ರಹ ಇರಲಿ ಇವತ್ತು ರಾತ್ರಿ ಪೂರ್ತಿಯಾಗಿ ಎಲ್ಲಿ ಜಾಗರಣೆ ನಡೆಯುತ್ತದೆ ಅಲ್ಲಿ ನಾವು ತೆರಳಿ ಶಿವನ ಕೃಪೆಗೆ ಪಾತ್ರರಾಗೋಣ. ಹಾಗೆಯೇ ನಮ್ಮ ಆಶ್ರಮದಲ್ಲಿಯೂ ಶಿವನಿಗೆ ಭಕ್ತರೇ ಸ್ವತಃ ಅಭಿಷೇಕ ಮಾಡುವ ವ್ಯವಸ್ಥೆಯನ್ನು ಸ್ವಾಮಿಜಿಯವರು 50 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿಯೂ ಕೂಡಾ ಜಾಗರಣೆ ನಡೆಯುತ್ತದೆ ಎಂದು ಹೇಳಿದರು.
ಎಲ್ಲರೂ ಕೂಡ ಮನೆಮನೆಗೆ ರಾಮ ಪಾದುಕೆಗಳನ್ನು ತರಿಸಿಕೊಳ್ಳಿ ನಮ್ಮ-ನಿಮ್ಮೆಲ್ಲರ ಒಂದು ಆಸೆ ಅಯೋಧ್ಯೆಯಲ್ಲಿ ರಾಮಮಂದಿರ ಆಗಬೇಕು ಎಂದು, ಆ ಕನಸು ನನಸಾಗುವ ಸಂದರ್ಭದಲ್ಲಿ ಅತ್ಯಂತ ಅದ್ಭುತವಾದಂತಹ ಒಂದು ಕಾರ್ಯವನ್ನು ರಾಮದಾಸ್ ಅವರು ಮಾಡುತ್ತಿದ್ದಾರೆ. ಜೊತೆಗೆ ಇಲ್ಲಿ ಸುತ್ತ 12 ದ್ವಾದಶ ಜ್ಯೋತಿರ್ಲಿಂಗಗಳ ಚರಿತ್ರೆಯನ್ನು ಕೂಡ ಹಾಕಿದ್ದಾರೆ ಎಲ್ಲರೂ ದೇವರ ದರ್ಶನ ಪಡೆದು ಕೃತಾರ್ಥರಾಗಿ ಎಂದು ಶ್ರೀಗಳು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ವಿಧಾನಪರಿಷತ್ ಶಾಸಕರಾದ ತೋಂಟದಾರ್ಯ, ಬಿಜೆಪಿ ಕೆ.ಆರ್.ಕ್ಷೇತ್ರದ ಅಧ್ಯಕ್ಷ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಕುಮಾರ್, ಓಂ ಶ್ರೀನಿವಾಸ್, ಉಪಾಧ್ಯಕ್ಷ ದೇವರಾಜೇ ಗೌಡ, ಸಂತೋಷ್ ಶಂಭು, ಎಂ ಆರ್. ಬಾಲಕೃಷ್ಣ ಅವರುಗಳು ಹಾಜರಿದ್ದರು.

