ನಂಜುಂಡೇಶ್ವರನಿಗೆ ಕಾಣಿಕೆಯ ಮಹಾಪೂರ

ಮೈಸೂರು: ದಕ್ಷಿಣಕಾಶಿ ನಂಜನಗೂಡಿನ ನಂಜುಂಡೇಶ್ವರನಿಗೆ ಕಾಣಿಕೆಯ ಮಹಾಪೂರವೆ ಹರಿದುಬಂದಿದೆ.

ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು,ಎರಡೇ ತಿಂಗಳಲ್ಲಿ ಶ್ರೀಕಂಠನಿಗೆ 2 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ.

25 ಹುಂಡಿಯಲ್ಲಿ 2,04,08,923 ಕೋಟಿ ರೂ ಸಂಗ್ರಹವಾಗಿದೆ.

120 ಗ್ರಾಂ ಚಿನ್ನ, 5 ಕೆಜಿ 600 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ.

ನಿಷೇಧಿತ ನೋಟುಗಳ ಕಾಣಿಕೆಯೂ ಮುಂದುವರೆದಿರುವುದು ಅಚ್ಚರಿ.

ಒಟ್ಟು 28,500 ರೂ ಮೌಲ್ಯದ ನಿಷೇಧಿತ ನೋಟುಗಳು ಸಂಗ್ರಹವಾಗಿದೆ. 1000 ರೂ.ಮುಖಬೆಲೆಯ 5 ನೋಟುಗಳು, 500 ರೂ.ಮುಖಬೆಲೆಯ 47 ನೋಟುಗಳು  ದೊರೆತಿದೆ.

ವಿದೇಶಿ ಭಕ್ತರಿಂದಲೂ ನಂಜುಂಡನಿಗೆ ಕಾಣಿಕೆ ಅರ್ಪಣೆಯಾಗಿದೆ. 15 ವಿದೇಶಿ ಕರೆನ್ಸಿ  ಸಂಗ್ರಹವಾಗಿದೆ.

ಕೊರೊನಾ ಮುಕ್ತವಾದ ನಂತರ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಹುಂಡಿ ಕಾಣಿಕೆಯಲ್ಲೂ ಹೆಚ್ಚಳವಾಗಿದೆ.

ಬ್ಯಾಂಕ್ ಸಿಬ್ಬಂದಿ ಹಾಗೂ ದೇವಾಲಯದ ಆಡಳಿತ ಮಂಡಳಿ ‌ಸಿಬ್ಬಂದಿ ಸೇರಿದಂತೆ ಸುಮಾರು 40 ಕ್ಕೂ ಹೆಚ್ಚು ಮಂದಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.