ಮೈಸೂರಿನ ಹುಕ್ಕಾ ಬಾರ್ ಗಳ ಮೇಲೆ ದಾಳಿ

ಮೈಸೂರು: ಮೈಸೂರು ನಗರದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಹುಕ್ಕಾ ಬಾರ್ ಗಳ ಮೇಲೆ ಬುಧವಾರ ದಾಳಿ ನಡೆಸಲಾಗಿದೆ.

ಮೈಸೂರಿನಲ್ಲಿ ನಡೆಸಲಾಗುತ್ತಿದ್ದ ಅಕ್ರಮ ಹುಕ್ಕಾ ಬಾರ್ ಮೇಲೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಬಹುತೇಕ 18 ವರ್ಷಕ್ಕೂ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳು ಹುಕ್ಕಾ ಬಾರ್ ನಲ್ಲಿ ಇದ್ದದ್ದು ಕಂಡು ಬಂದಿದೆ.

ನಗರದ ನಾಲ್ಕು ಕಡೆಗಳಲ್ಲಿ ಈ ದಾಳಿ ನಡೆಸಲಾಗಿದೆ.

ಪಾಲಿಕೆ ಅಧಿಕಾರಿಗಳು 3 ಹುಕ್ಕಾ ಬಾರ್ ಗಳನ್ನು ಸೀಜ್ ಮಾಡಿದ್ದಾರೆ.

ಈ ದಾಳಿ ಮೇಯರ್ ಸುನಂದಾ ಪಾಲನೇತ್ರ ಅವರ ನೇತೃತ್ವದಲ್ಲಿ ನಡೆದಿದೆ.