ಖಾಸಗಿ ಕಂಪನಿ ಹೆಸರಿನ ಔಷಧಿ ಬರೆದರೆ ಕ್ರಮ: ಸರ್ಕಾರಿ ವೈದ್ಯರಿಗೆ ಎಚ್ಚರಿಕೆ ನೀಡಿದ ಸುಧಾಕರ್

ಮೈಸೂರು: ಡಾ.ಕೆ.ಸುಧಾಕರ್ ಮಾತನಾಡಿ ಸರ್ಕಾರಿ ವೈದ್ಯರು ಖಾಸಗಿ ಕಂಪನಿ ಹೆಸರಿನ ಔಷಧಿ ಬರೆದರೆ ಕ್ರಮ ಕೈಗೊಳ್ಳಲಾಗುವುದು  ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಎಚ್ಚರಿಕೆ ನೀಡಿದರು.

ಸೋಮವಾರ ಜನೌಷಧಿ ದಿವಸ ಅಂಗವಾಗಿ  ಮೈಸೂರಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿ, ಹೋಟೆಲೊಂದರಲ್ಲಿ  ಏರ್ಪಡಿಸಲಾದ ಪ್ರಧಾನಮಂತ್ರಿಗಳ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.

ಜನೌಷಧ ಎಲ್ಲಾ ರೀತಿಯಲ್ಲೂ ಪರಿಣಾಮಕಾರಿಯಾಗಿದೆ. ಜೊತೆಗೆ ಅತ್ಯಂತ ಕಡಿಮೆ ದರದಲ್ಲಿ ಸಿಗುತ್ತಿದೆ.

ಕೆಲವರು ಮಾತ್ರ ಇದನ್ನು  ಬಳಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟಕ್ಕೆ ಜನೌಷಧವನ್ನು  ತೆಗೆದುಕೊಂಡು ಹೋಗಲಾಗುವುದು ಎಂದು ತಿಳಿಸಿದರು.

ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಜನೌಷಧ ಲಭ್ಯವಿರುವಂತೆ ನೋಡಿಕೊಳ್ಳಲಾಗುವುದು ಎಂದರು.

ಜನೌಷಧ ಬಳಕೆಯಲ್ಲಿ ಕರ್ನಾಟಕ ದೇಶದಲ್ಲಿ ಮೂರನೇ ಸ್ಥಾನದಲ್ಲಿ ಇದೆ. ಇದನ್ನು ಮೊದಲ ಸ್ಥಾನ ಪಡೆಯುವಂತಾಗಲು  ಇನ್ನೂ ಹೆಚ್ಚಿನ ಕೇಂದ್ರ ತೆರೆಯಲಾಗುವುದು ಎಂದು ಸುಧಾಕರ್ ಭರವಸೆ ನೀಡಿದರು.

ಶಾಸಕ ರಾಮದಾಸ್ ಮಾತನಾಡಿ ಉತ್ತಮ ಗುಣಮಟ್ಟದ ಜೆನರಿಕ್ ಕೇಂದ್ರಗಳಲ್ಲಿ ಔಷಧಿಗಳು ಕಡಿಮೆ ಬೆಲೆಯಲ್ಲಿ ದೊರಕಲಿದೆ. ಮಧುಮೇಹಿಗಳ ಔಷಧಿಗಳು ಹೊರಗಡೆ 67ರೂ.ಗಳಿರುತ್ತವೆ ಆದರೆ ಜನೌಷಧಿ ಕೇಂದ್ರದಲ್ಲಿ 16ರೂ.ಗಳಿಗೆ ಲಭಿಸುತ್ತದೆ ಉದಾಹರಣೆ ಸಹಿತ ವಿವರಿಸಿದರು.

ಕರ್ನಾಟಕದಲ್ಲಿ ಮೈಸೂರು ಜನೌಷಧಿ  ಉಪಯೋಗದಲ್ಲಿ ಮೂರನೇ ಸ್ಥಾನದಲ್ಲಿದೆ. ಇಂದು ಪ್ರಧಾನಮಂತ್ರಿಗಳು ದೇಶದ   ಐದು ನಗರಗಳ ಜನೌಷಧಿ ಲಾಭಾರ್ಥಿಗಳ ಜೊತೆ ಮಾತನಾಡುತ್ತಿದ್ದು ಈ ಐದು ಸ್ಥಳಗಳಲ್ಲಿ ಮೈಸೂರು ಕೂಡ ಆಯ್ಕೆಯಾಗಿರುವುದು ಅತ್ಯಂತ ಸಂತಸದ ವಿಷಯ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮತ್ತಿತರರು ಉಪಸ್ಥಿತರಿದ್ದರು.