ಉಕ್ರೇನ್ : ರಷ್ಯಾ ಮತ್ತು ಉಕ್ರೇನ್ ನಡುವಿನ ಮಿಲಿಟರಿ ಸಂಘರ್ಷ 13ನೇ ದಿನಕ್ಕೆ ಕಾಲಿಟ್ಟಿದ್ದು ಉಕ್ರೇನ್ ಅಧ್ಯಕ್ಷ ವೋಡ್ಲಿಮಿರ್ ಝೆಲೆನ್ಸ್ಕಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ.
ನಾನು ಕೀವ್ ನಗರದಲ್ಲಿಯೇ ಇದ್ದೇನೆ, ಎಲ್ಲೂ ಅಡಗಿಕೊಂಡಿಲ್ಲ, ಯಾರಿಗೂ ಹೆದರುವುದಿಲ್ಲ. ನಮ್ಮ ದೇಶಭಕ್ತಿಯಿಂದಲೇ ಯುದ್ಧ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.
ತಡರಾತ್ರಿ ತಮ್ಮ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಮಾತನಾಡಿರುವ ಝೆಲೆನ್ಸ್ಕಿ ,ತಮ್ಮ ಕಚೇರಿಯಿಂದ ತಾವಿರುವ ನಗರವನ್ನು ತೋರಿಸಿದ್ದಾರೆ.
ನಾನು ಕೀವ್‍ನ ಬಂಕೋವಾ ಸ್ಟ್ರೀಟ್‍ನಲ್ಲಿ ಇದ್ದೇನೆ. ಎಲ್ಲೂ ಅವಿತುಕೊಂಡಿಲ್ಲ. ಯಾರಿಗೂ ಹೆದರುವುದಿಲ್ಲ. ನಮ್ಮ ದೇಶಭಕ್ತಿ ಈ ರೀತಿಯ ಇದೆ. ಆದಷ್ಟು ಬೇಗ ಈ ದೇಶಭಕ್ತಿ ಯುದ್ದವನ್ನು ಗೆಲ್ಲುತ್ತದೆ ಎಂದಿದ್ದಾರೆ.
ಉಕ್ರೇನ್ ಮತ್ತು ರಷ್ಯಾದ ನಿಯೋಗಗಳು ಬೆಲರಾಸ್ ಪೋಲೆಂಡ್ ಗಡಿಯಲ್ಲಿ ನಡೆಸಿದ ಮೂರನೇ ಸುತ್ತಿನ ಶಾಂತಿ ಮಾತುಕತೆ ಕೂಡ ವಿಫಲವಾದ ಬೆನ್ನಲ್ಲೆ ಝೆಲೆನ್ಸ್ಕಿ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

