ನವದೆಹಲಿ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 21 ವರ್ಷದ ಸಾಯಿನಿಕೇಶ್ ರವಿಚಂದ್ರನ್ ಎಂಬ ವಿದ್ಯಾರ್ಥಿ ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್ನಲ್ಲಿ ಅರೆಸೈನಿಕ ಪಡೆಯನ್ನು ಸೇರಿಕೊಂಡಿದ್ದಾರೆ.
ರವಿಚಂದ್ರನ್ ಸ್ವಯಂಸೇವಕರನ್ನು ಒಳಗೊಂಡಿರುವ ಜಾರ್ಜಿಯನ್ ನ್ಯಾಷನಲ್ ಲೀಜನ್ ಅರೆಸೇನಾ ಘಟಕದ ಭಾಗವಾಗಿ ಉಕ್ರೇನಿಯನ್ ಪಡೆಗೆ ಸೇರ್ಪಡೆಗೊಂಡಿದ್ದಾರೆ ಎಂದು ತಮಿಳುನಾಡು ಸರ್ಕಾರ ಕೇಂದ್ರಕ್ಕೆ ತಿಳಿಸಿದೆ.
2018 ರಲ್ಲಿ ಉಕ್ರೇನ್ ನ ಖಾರ್ಕಿವ್ ನಲ್ಲಿರುವ ನ್ಯಾಷನಲ್ ಏರೋಸ್ಪೇಸ್ ಯೂನಿವರ್ಸಿಟಿಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ಕೋರ್ಸ್ ಅನ್ನು ಅಧ್ಯಯನ ಮಾಡಲು ಸಾಯಿಕೇಶ್ ರವಿಚಂದ್ರನ್ ತೆಳಲಿದ್ದರು.
ಅವರು ಈ ಮೊದಲು ಭಾರತೀಯ ಸೇನೆಗೆ ಸೇರಲು ಅರ್ಜಿ ಸಲ್ಲಿಸಿದ್ದರು ಆದರೆ ತಿರಸ್ಕರಿಸಲಾಗಿತ್ತು ಎಂದು ಹೇಳಲಾಗಿದೆ.
ರಷ್ಯಾ-ಉಕ್ರೇನ್ ಸಂಘರ್ಷದ ನಡುವೆ, ಸಾಯಿಕೇಶ್ ಅವರ ಕುಟುಂಬವು ಅವರೊಂದಿಗೆ ಸಂವಹನವನ್ನು ಕಳೆದುಕೊಂಡಿತು.
ನಂತರ ಅವರ ಕುಟುಂಬ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ ನಂತರ 21 ವರ್ಷದ ಯುವಕ ಸಾಯಿನಿಕೇಶ್ ರವಿಚಂದ್ರನ್ ರಷ್ಯಾದ ಆಕ್ರಮಣ ವಿರುದ್ಧ ಹೋರಾಡಲು ಉಕ್ರೇನಿಯನ್ ಅರೆಸೈನಿಕ ಪಡೆ ಸೇರಿ ಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

