ಮೈಸೂರು: ಹಿಂದಿನ ಕಾಲದಲ್ಲಿ ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದಳು, ಆದರೆ ಈಗ ಕಾಲ ಬದಲಾಗಿದೆ ಪುರಷ ಪ್ರಧಾನ ಸಮಾಜದಲ್ಲಿ ಮಹಿಳೆ ಎಲ್ಲಾ ರಂಗದಲ್ಲಿಯೂ ಮುಂಚೂಣಿಯಲ್ಲಿದ್ದಾಳೆ ಎಂದು ನಗರಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್ ಹೇಳಿದರು
ಸೀತಾ ವಿಲಾಸ ರಸ್ತೆಯಲ್ಲಿರುವ ಸೀತಾರಾಮ ಸ್ವಾಮಿ ದೇವಸ್ಥಾನದ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ರೀಡೆ, ಸಿನಿಮ, ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲಿಯೂ ಮಹಿಳೆ ಪುರುಷನಿಗೆ ಸರಿಸಮಾನವಾಗಿ ನಿಂತಿದ್ದಾಳೆ. ಆದರೂ ಮಹಿಳೆಯ ಮೇಲಿನ ಶೋಷಣೆ ಇನ್ನು ನಿಂತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇದು ಪೈಪೋಟಿ ಯುಗವಾಗಿರುವುದರಿಂದ ಪುರಷ-ಮಹಿಳೆ ಸಮಾನವಾಗಿ ದುಡಿದಾಗ ಮಾತ್ರ ನೆಮ್ಮದಿಯಾದ ಬದುಕು ಸಾಗಿಸಬಹುದು ಎಂದು ಹೇಳಿದರು.
ವಿಶ್ವ ಮಹಿಳಾ ದಿನಾಚರಣೆ ಆಚರಿಸಿಕೊಳ್ಳುವಷ್ಟು ಮಹಿಳೆ ಮುಂದುವರೆದಿದ್ದರೂ ಇನ್ನು ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ, ಶೋಷಣೆ ನಿರಂತರವಾಗಿ ನಡೆಯುತ್ತಿದೆ ಇದು ನಿಂತಾಗ ಮಾತ್ರ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದು ತಿಳಿಸಿದರು.
ಯಶೋದಮ್ಮ (ವಕೀಲರ ಕ್ಷೇತ್ರ ), ಭಾರತಿ (ಸಾಹಿತ್ಯ ಕ್ಷೇತ್ರ ), ಚಾರುಲತಾ ಮೋಹನ್ (ಧಾರ್ಮಿಕ ಕ್ಷೇತ್ರ ),
ಸುರಕ್ಷಾ ಅಂಗನವಾಡಿ (ಸಾಮಾಜಿಕ ಕ್ಷೇತ್ರ ), ಮಮತಾ (ವೈದ್ಯಕೀಯ ಕ್ಷೇತ್ರ ), ರೂಪ ನಾಗರಾಜ್ (ಸಾಂಸ್ಕೃತಿಕ ಕ್ಷೇತ್ರ ),ಪುಷ್ಪಲತಾ (ಕರೋನಾ ವಾರಿಯರ್ ),ಪಾರ್ವತಮ್ಮ ಪೌರ ಕಾರ್ಮಿಕರು (ಸ್ವಚ್ಚತಾ ಕ್ಷೇತ್ರ) ಇವರುಗಳನ್ನು ಸನ್ಮಾನಿಸಲಾಯಿತು.
ಪರಮಪೂಜ್ಯ ಇಳೆಯಾಳ್ವಾರ್ ಸ್ವಾಮೀಜಿ ,ಕಾಂತಿಲಾಲ್ ಜೈನ್ ,ಚಾಮರಾಜ ಕ್ಷೇತ್ರದ ಬಿಜೆಪಿ ಮಹಿಳಾ ಉಪಾಧ್ಯಕ್ಷೆ ಲಕ್ಷ್ಮಿ ,ವಿಘ್ನೇಶ್ವರಭಟ್,ಶ್ರೀನಿವಾಸ್,ಚಾಮರಾಜ ಕ್ಷೇತ್ರದ ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಸಚಿನ್,ಪಾಪಣ್ಣ ,ಸುದರ್ಶನ್,ಸನತ್,ಶಿವು ,ರಚನ,ಸುಕನ್ಯಾ ಮತ್ತಿತರರು ಹಾಜರಿದ್ದರು.

