ಪರಿಸರ,ಪ್ರಾಣಿ-ಪಕ್ಷಿ ಸಂರಕ್ಷಿಸಲು ಮಹಾದೇವಸ್ವಾಮಿ ಕರೆ

ಮೈಸೂರು: ‌ಪ್ರಾಣಿಪಕ್ಷಿಗಳು ಹಾಗೂ ಪರಿಸರ ಉಳಿಸುವ ಸೇವಾಮನೋಭಾವ ಬೆಳಸಿಕೊಳ್ಳಬೇಕು ಎಂದು ಕರ್ನಾಟಕ  ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಲ್. ಆರ್. ಮಹಾದೇವ ಸ್ವಾಮಿ ತಿಳಿಸಿದ್ದಾರೆ.

ನ್ಯಾಯಾಲಯದ ಮುಂಭಾಗ  ಮರಗಿಡಗಳಲ್ಲಿ ಆಹಾರ ನೀರಿನ ಬಟ್ಟಲು ಅಳವಡಿಸುವ ಮೂಲಕ ಎಲ್. ಆರ್ ಮಹದೇವಸ್ವಾಮಿ ಅವರು ಮುಕ ಸ್ಪಂದನ ಅಭಿಯಾನಕ್ಕೆ  ಚಾಲನೆ ನೀಡಿ  ಮಾತನಾಡಿದರು.

ಮನುಷ್ಯ ಪ್ರತಿಯೊಂದಕ್ಕೂ ಪರಿಸರದ ಮೇಲೆ ಅವಲಂಬಿತನಾಗುತ್ತಾನೆ ಆದರೆ  ಪ್ರಾಣಿಪಕ್ಷಿಗಳ ಪರಿಸರ ಉಳಿಸುವ ಸೇವಾಮನೋಭಾವ ಬೆಳಸಿಕೊಳ್ಳಬೇಕು ಎಂದು ಹೇಳಿದರು.

ಹೆಚ್ಚು ಸಸಿಗಳನ್ನು ನೆಡಲು ಮುಂದಾದರೆ ಪ್ರಾಣಿಪಕ್ಷಿಗಳ ರಕ್ಷಣೆಯಾಗುತ್ತದೆ, ಭವಿಷ್ಯದ ಪರಿಸರ ಸಂರಕ್ಷಣೆಯ ಪರಿಕಲ್ಪನೆಯ ನಿಟ್ಟಿನಲ್ಲಿ ಮೈಸೂರು ಅರಸರು ಮೃಗಾಲಯ, ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ ಮಾದರಿ ಬಡಾವಣೆಗಳ ಉದ್ಯಾನವನಗಳನ್ನು ನಿರ್ಮಿಸಿದ್ದಾರೆ ಅದನ್ನು ಉಳಿಸಿಕೊಂಡು ಹೋಗುವುದು ಮೈಸೂರಿಗರ ಕರ್ತವ್ಯ ಎಂದು ಸಲಹೆ ನೀಡಿದರು.

ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮಾತನಾಡಿ ಹಿಂದೆ ಮೈಸೂರಿನ ಪ್ರತಿ ಮನೆಗಳ ಮುಂದೆ ಹಸು ಕರು  ಪಕ್ಷಿಗಳು ನೀರು ಕುಡಿಯಲು ಕಲ್ಲಿನ ನೀರಿನ ತೊಟ್ಟಿ ಯನ್ನು ಮನೆ ಮುಂದೆ ಸ್ಥಾಪಿಸುತ್ತಿದ್ದರು. ಆದರೆ ಈ ದಿನಗಳಲ್ಲಿ ಅವೆಲ್ಲ ಕಣ್ಮರೆ ಆಗಿರುವುದು ವಿಷಾದನೀಯ ಎಂದರು.

ಮೈಸೂರು ವಕೀಲರ ಸಂಘದ ಅಧ್ಯಕ್ಷರಾದ ಎಂ. ಮಹದೇವಸ್ವಾಮಿ ಮಾತನಾಡಿ ನ್ಯಾಯಾಲಯದ ಆವರಣದಲ್ಲೂ ಸಣ್ಣಪುಟ್ಟ ಪ್ರಾಣಿ ಪಕ್ಷಿಗಳ ಸಂಖ್ಯೆ ಹೆಚ್ಚಿದೆ ಎಂದು ತಿಳಿಸಿದರು.

ಪ್ರಾಣಿ ಪಕ್ಷಿಗಳು ತಮ್ಮ ಅಳಲನ್ನು ಹೇಳಿಕೊಳ್ಳಲು ಆಗುವದಿಲ್ಲ ಹಾಗಾಗಿ ಪರಿಸರ ರಕ್ಷತಿ ರಕ್ಷಿತಃ ಅಭಿಯಾನ ಶ್ಲಾಘನೀಯ, ನಮ್ಮ ವಕೀಲರ ಸಂಘದ ವತಿಯಿಂದಲೂ ನ್ಯಾಯಾಲಯದ ಆವರಣದಲ್ಲಿರುವ ಮರಗಳಲ್ಲಿ ಪ್ರಾಣಿಪಕ್ಷಿಗಳಿಗೆ ಆಹಾರ ನೀರು ಇಡುವ  ಅಭಿಯಾನ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಉಮೇಶ್ ,ಹಿರಿಯ ಸಮಾಜ ಸೇವಕ  ಕೆ. ರಘುರಾಂ ವಾಜಪೇಯಿ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ವಕೀಲರಾದ ಕವಿತಾ ಕಹಳೆ ,ಕೆ ಎಂ ಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ,ಪರಿಸರ ಸ್ನೇಹಿ ಜನದ ಅಧ್ಯಕ್ಷ ಲೋಹಿತ್ ,ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್ ,ಎಸ್ ಎನ್ ರಾಜೇಶ್ ,ಸುಚೇಂದ್ರ ,ಕಾರ್ತಿಕ್ ಮರಿಯಪ್ಪ ,ಚಕ್ರಪಾಣಿ ,ನವೀನ್, ಧನರಾಜ್ ,ಮಂಜುನಾಥ್ ,ರಾಜೇಶ್ ಕುಂಚಿಟಿಗ ಮತ್ತಿತರರು ಹಾಜರಿದ್ದರು.