ಕೀವ್ ನಲ್ಲಿ ರಷ್ಯಾದ ಆಕ್ರಮಣ ಮುಂದುವರಿಕೆ

ಉಕ್ರೇನ್‌: ರಷ್ಯಾದ ಪಡೆಗಳು ವಾಯುವ್ಯ ಮತ್ತು ಪೂರ್ವದಿಂದ ಕೀವ್ ಕಡೆಗೆ  ಆಕ್ರಮಣವನ್ನು ಮುಂದುವರೆಸಿವೆ.

ವಾಯುವ್ಯದ ಕುಖಾರಿಯಿಂದ 90 ಕಿ.ಮೀ.  ಪೂರ್ವಕ್ಕೆ ಡೆಮಿಡೋವ್ ಮೂಲಕ 40 ಕಿ.ಮೀ. ಉಕ್ರೇನಿಯನ್ ರಕ್ಷಣಾ ಕೋಟೆಯನ್ನು ಭೇದಿಸಲು ರಷ್ಯಾ ಪಡೆಗಳು ಪ್ರಯತ್ನಿಸುತ್ತಿವೆ ಎಂದು ಉಕ್ರೇನ್ ನ ಸಶಸ್ತ್ರ ಪಡೆಗಳು ತಿಳಿಸಿವೆ.

ಉಕ್ರೇನ್‍‌ ನ ಬಕ್ಲಾನೋವಾ ಮುರಾವಿಕಾ ಪಟ್ಟಣವನ್ನು ಪುನಃ ವಶಪಡಿಸಿಕೊಳ್ಳುವ ಮೂಲಕ ರಷ್ಯಾದ ಪಡೆಗಳು ಕೀವ್ ಕಡೆಗೆ ಚಲಿಸಿವೆ ಎಂದು ವರದಿಯಾಗಿದ್ದು, ರಷ್ಯಾದ ಪಡೆಗಳು ಖಾರ್ಕಿವ್ ಅನ್ನು ದಿಗ್ಬಂಧನಗೊಳಿಸುತ್ತಿವೆ.

ವೊಲೊಡಿರ್ಮಿ ಝೆಲೆನ್ಸ್ಕಿಯ ತವರು ಮೈಕೊಲೈವ್, ಝಪೊರಿಝಿಯಾ ಮತ್ತು ಕ್ರಿವಿ ರಿಹ್ ನಗರಗಳ ಸುತ್ತಲೂ ದಕ್ಷಿಣದಲ್ಲಿ  ಆಕ್ರಮಣವನ್ನು ಮುಂದುವರೆಸಿವೆ.

ರಷ್ಯಾದ ವೈಮಾನಿಕ ದಾಳಿಯಲ್ಲಿ ಡಿನಿಪ್ರೊಜಿಲ್ಲಾಯ ಶಿಶುವಿಹಾರ, ಅಪಾರ್ಟ್‍ಮೆಂಟ್ ಕಟ್ಟಡ, ಎರಡು ಅಂತಸ್ತಿನ ಶೂ ಕಾರ್ಖಾನೆಗೆ ಬಾಂಬ್ ದಾಳಿ ನಡೆದಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.

ಬಾಂಬ್ ಸೋಟದ ವೀಡಿಯೊಗಳು ವೈರಲ್ ಆಗಿದ್ದು, ಭಾರಿ ಪ್ರಮಾಣದ ಶಬ್ದ ಮತ್ತು ಹೊಗೆಯು ನಗರದಿಂದ ಹೊರಹೊಮ್ಮುತ್ತಿರುವ ದೃಶಗಳು ಅಲ್ಲಿನ ಭಯಂಕರ ಪರಸ್ಥಿಯನ್ನು ಬಿಂಬಿಸುತ್ತುದೆ.

ಮಾರಿಯುಪೋಲ್‍ನಲ್ಲಿ ಪ್ರತಿ ಮೂವತ್ತು ನಿಮಿಷಗಳಿಗೊಮ್ಮೆ ರಷ್ಯಾದ ಪಡೆಗಳು ವಸತಿ ಪ್ರದೇಶಗಳು ಒಳಗೊಂಡಂತೆ ನಗರದ ಮೇಲೆ ಶೆಲ್ ದಾಳಿ ನಡೆಸುತ್ತಿವೆ.

ಮಾರಿಯುಪೋ ಲ್‍ನಲ್ಲಿರುವ ಆಸ್ಪತ್ರೆಯೊಂದರಲ್ಲಿ ಬಾಂಬ್ ದಾಳಿ ನಡೆಸಲಾಗಿದ್ದು, 17 ನಾಗರಿಕರು ಗಾಯಗೊಂಡಿದ್ದಾರೆ.