ಕರ್ನಾಟಕದತ್ತ ಮೋದಿ ಚಿತ್ತ

ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಈಗ ಕರ್ನಾಟಕದ ರಾಜಕೀಯದತ್ತ ಗಮನ ಹರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬರುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ ಜತೆಗೆ ಕರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದೆ.

ಬಿಜೆಪಿಗೆ ಮುಂದಿನ ವರ್ಷ ಕರ್ನಾಟಕದಲ್ಲಿ ನಡೆಯುವ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ.

ಈ ನಿಟ್ಟಿನಲ್ಲಿ ಈಗಿನಿಂದಲೇ ಚುನಾವಣಾ ತಯಾರಿಗೆ ಪಕ್ಷಗಳು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಪ್ರಧಾನಿಗಳು ಮಾ.24 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅವರು ಕಲಬುರಗಿಗೆ ಭೇಟಿ ನೀಡುತಿರುವುದು ವಿಶೇಷವಾಗಿದೆ.

ಮೋದಿ ಕೇಂದ್ರದ ಮಹತ್ವದ ಸ್ವಾಮಿತ್ವ ಯೋಜನೆಯ ಪ್ರಾಯೋಗಿಕ ಚಾಲನೆ ನೀಡಲು ಕಲಬುರಗಿಗೆ ಆಗಮಿಸಲಿದ್ದಾರೆ ಎಂದು ಮಾಹಿತಿ ಇದೆ.

ಆದರೆ ಈ ಹಿಂದಿನ ಇತಿಹಾಸವನ್ನು ಗಮನಿಸಿದರೆ, ಈ ಭೇಟಿಯ ಹಿಂದೆ ಭಾರೀ ನಿರೀಕ್ಷೆ ಮತ್ತು ಲೆಕ್ಕಾಚಾರ ಅಡಗಿದೆ. ನಾಲ್ಕು ವರ್ಷಗಳ ಹಿಂದೆ ಕರ್ನಾಟಕದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಿಗೂ ಮುನ್ನ ಮೋದಿ ಕಲಬುರಗಿಗೆ ಮೋದಿ ಭೇಟಿ ನೀಡಿದ್ದರು.

ಆಗಿನ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಚುನಾವಣೆಗೆ ಮುಂದಾಗಿದ್ದರು. ಇದೀಗ ಮತ್ತೆ ಮೋದಿ ಈ ಬಾರಿಯೂ ಕಲಬುರಗಿಯಿಂದಲೇ ಚುನಾವಣಾ  ಕಹಳೆ ಮೊಳಗಿಸ್ತಾರಾ ಎಂಬ ಕೂತುಹಲ ಗರಿಗೆದರಿದೆ.

ಆದರೆ ಇನ್ನೂ  ಕಲಬುರಗಿ ಭೇಟಿಯ ಬಗ್ಗೆ ಪ್ರಧಾನಿ ಕಚೇರಿಯಿಂದ ದೃಢವಾಗಿಲ್ಲ. ಸಧ್ಯದಲ್ಲೇ ಅಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.