ಉಕ್ರೇನ್ ನ ನಗರಗಳ ಮೇಲೆ ಫಿರಂಗಿ ದಾಳಿ

ಉಕ್ರೇನ್: ರಾಜಧಾನಿ ಕೈವ್ ಮತ್ತು ಇತರ ನಗರಗಳ ನಾಗರಿಕ ಪ್ರದೇಶಗಳ ಮೇಲೆ ರಷ್ಯಾ ಪಡೆಗಳು ಫಿರಂಗಿ ದಾಳಿಯನ್ನು ಮುಂದುವರೆಸಿವೆ.

ಪಶ್ಚಿಮದಲ್ಲಿ ವಾಯುನೆಲೆ ಮತ್ತು ಪೂರ್ವದಲ್ಲಿ ಪ್ರಮುಖ ಕೈಗಾರಿಕಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಆಕ್ರಮಣವನ್ನು ತೀವ್ರಗೊಳಿಸಿದೆ.

ರಾಜಧಾನಿ ಕೈವ್, ಎಲ್ವಿವ್ ಮತ್ತು ಖಾರ್ಕಿವ್, ಚೆರ್ಕಾಸಿ ಮತ್ತು ದೇಶದ ಈಶಾನ್ಯದಲ್ಲಿರುವ ಸುಮಿ ಪ್ರದೇಶದಲ್ಲಿ ಹೆಚ್ಚು ಸೈರನ್‍ಗಳು ಕೇಳಿಬಂದವು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ರಷ್ಯಾದ ಪಡೆಗಳು ವೇಗವಾಗಿ ಆಕ್ರಮಣ ಮಾಡುತ್ತಿದ್ದು, ನಗರಗಳು ಭಗ್ನಾವಶೇಷಗೊಂಡಿವೆ.

ದಕ್ಷಿಣ ಬಂದರು ನಗರ ಮಾರಿಯುಪೋಲ್‍ನಲ್ಲಿ ಪರಿಸ್ಥಿತಿಯು ಕಠೋರವಾಗಿದೆ, ಇದನ್ನು ಸುತ್ತುವರೆದಿರುವ ರಷ್ಯಾ ನಿರಂತರ ಶೆಲ್ ದಾಳಿ ನಡೆಸಿದೆ. ಮರಿಯುಪೋಲ್ 11 ದಿನಗಳಿಂದ ನೀರು ಮತ್ತು ವಿದ್ಯುತ್ ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ.

ರಷ್ಯಾದ ಪಡೆಗಳು ರಾಜಧಾನಿಯ ವಸತಿ ಪ್ರದೇಶಗಳ ಮೇಲೆ ಫಿರಂಗಿ ಮತ್ತು ಗುಂಡಿನ ದಾಳಿ ನಡೆಸಿರುವ ಬಗ್ಗೆ ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟವಾಗಿದೆ.