ಮೋದಿಯಿಂದ ಜನತೆಯಲ್ಲಿ ಜಾಗೃತಿ ಮೂಡಿದೆ -ಸಿಎಂ

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ಜಡ್ಡುಗಟ್ಟಿದ ಸಮಾಜ ಮತ್ತು ರಾಜಕಾರಣದಲ್ಲಿ ನವ‌ ಸಂಚಲನ ಉಂಟು ಮಾಡಿದ್ದರಿಂದ ದೇಶದ ಜನತೆಯಲ್ಲಿ ಜಾಗೃತಿ ಮೂಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಚಿಕ್ಕಬಳ್ಳಾಪುರದ ಗುಂಗೀರ್ಲಹಳ್ಳಿಯಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಕಂದಾಯ ದಾಖಲೆಗಳು ಮನೆಬಾಗಿಲಿಗೆ ರಾಜ್ಯಮಟ್ಟದ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬೊಮ್ಮಾಯಿ ಮಾತನಾಡಿದರು.

ಈ ಹಿಂದಿನ ಸರ್ಕಾರಗಳು ರಾಜಕಾರಣವನ್ನು ಕೇವಲ ಅಧಿಕಾರ ಗ್ರಹಣಕ್ಕಾಗಿ ಮಾತ್ರ ಮಾಡಿಕೊಂಡು ಬಂದರು, ಆದರೆ ಬಿಜೆಪಿ  ಜನತೆಯ ಸೇವೆ ಮಾಡುವುದಕ್ಕಾಗಿ ಅಧಿಕಾರದ ಹಿಡಿದಿದೆ ಎಂದು ಹೇಳಿದರು.

ನಮ್ಮ ಸರ್ಕಾರದ ದಿಟ್ಟ ಯೊಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು, ಆ ಕಾರಣದಿಂದಾಗಿ ರಾಜ್ಯದ ಕುಗ್ರಾಮಗಳಲ್ಲಿ ಒಂದಾದ ಗುಂಗೀರ್ಲಹಳ್ಳಿಗೆ ನಾನು ಬಂದಿದ್ದೇನೆ ಎಂದರು.

ರೈತರಿಂದ ರೈತರಿಗೆ ಅನುಕೂಲವಾಗುವ ರೀತಿ ಇಡೀ ರಾಷ್ಟದಲ್ಲೆ ಕ್ಷೀರ ಸಮೃದ್ದಿ ಬ್ಯಾಂಕ್ ಪ್ರಾರಂಭಿಸಲು ಬಜೆಟ್‍ಲ್ಲಿ ಘೋಷಣೆ ಮಾಡಿ ಇದಕ್ಕಾಗಿ 100 ಕೋಟಿ ರೂ ಅನುದಾನ ಪ್ರಾರಂಭಿಕವಾಗಿ ನೀಡಲಾಗಿದೆ ಎಂದು ತಿಳಿಸಿದರು.ಎತ್ತಿನ ಹೊಳೆಯ ನೀರನ್ನು ಈ ಭಾಗಕ್ಕೆ ಹರಿಸಲು ಪ್ರಾಮಾಣಿಕ ಪ್ರಯತ್ನಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದರು.