ಕಾಂಗ್ರೆಸ್ ಪಾರ್ಟಿ ಪಾರ್ಟ್ ಟೈಂ ಪಾರ್ಟಿಯಾಗಿ ಉಳಿಯತ್ತೆ -ಶ್ರೀರಾಮುಲು

ಗದಗ: ಕಾಂಗ್ರೆಸ್ ಪಕ್ಷ ಪಾರ್ಟ್ ಟೈಂ ಪಾರ್ಟಿಯಾಗಿ ಉಳಿಯತ್ತೆ ಎಂದು ಗದಗನಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರು ಪಾರ್ಟೈಂ ರಾಜಕಾರಣಿಯಾಗಿ ಉಳಿಯುತ್ತಾರೆ ಎಂದು ಸಂತೋಷ್ ಜೀ ಹೇಳಿದ್ದರು ಇವತ್ತು ಆ ಮಾತು ಸತ್ಯವಾಗುತ್ತಿದೆ ಎಂದರು.

ಕೇವಲ ರಾಹುಲ್ ಗಾಂಧಿ ಅಷ್ಟೇ ಅಲ್ಲ ಇಡೀ ಕಾಂಗ್ರೆಸ್ ಪಾರ್ಟಿಯೇ ಪಾರ್ಟ್ ಟೈಂ ಪಕ್ಷವಾಗಿ ಉಳಿಯುತ್ತದೆಂದು ರಾಮುಲು ಹೇಳಿದರು.

ಪಂಚರಾಜ್ಯ ಚುನಾವಣೆಯ ಫಲಿತಾಂಶವನ್ನು ನೋಡಿದಾಗ ಕಾಂಗ್ರೆಸ್ ಪಕ್ಷ ಧೂಳಿಪಟವಾಗುವುದು ನೂರಕ್ಕೆ ನೂರು ಸತ್ಯ ಎಂದರು.

ಇನ್ನು ಉತ್ತರ ಕರ್ನಾಟಕದವರೇ ಆದ ಸಿಎಂ ಬಸವರಾಜ ಬೊಮ್ಮಾಯಿಯವರು ಕೇವಲ ಬೆಂಗಳೂರು ಬಜೆಟ್ ಮಾಡದೇ ಇಡೀ ಕರ್ನಾಟಕಕ್ಕೆ ನ್ಯಾಯ ಸಮ್ಮತವಾದ ಬಜೆಟ್ ನ್ನು ಮಂಡಿಸಿದ್ದಾರೆಂದರು.