ಮೈಸೂರು: ಕೃಷ್ಣರಾಜ ಕ್ಷೇತ್ರದ ಎಸ್.ಎಮ್. ಟಿ ಆಸ್ಪತ್ರೆಯಲ್ಲಿ ಬುಧವಾರ 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ವ್ಯಾಕ್ಸಿನೇಷನ್ ಹಾಕಲು ಚಾಲನೆ ನೀಡಲಾಯಿತು.
ಉದ್ಘಾಟನೆಯನ್ನು ಶಾಸಕ ಎಸ್.ಎ.ರಾಮದಾಸ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಮದಾಸ್, ಇಡೀ ದೇಶದಲ್ಲಿ ಈ ದಿನ 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ವ್ಯಾಕ್ಸಿನೇಷನ್ ಅನ್ನು ನೀಡಲು ಪ್ರಾರಂಭವಾಗಿದೆ. ಲಸಿಕೆ ವಿಷಯದಲ್ಲಿ ಭಾರತ ಮುಂದಿದೆ ಎಂದು ಹೇಳಿದರು.
ಚೈನಾದಲ್ಲಿ ಮತ್ತೊಂದು ಅಲೆ ಪ್ರಾರಂಭವಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ಮೋದಿಯವರು ಮಕ್ಕಳಿಗೆ ಲಸಿಕೆ ನೀಡಲು ನಿರ್ಧರಿಸಿದರು ಎಂದು ತಿಳಿಸಿದರು.
10 ನೇ ತರಗತಿಯ ಮಕ್ಕಳಿಗೆ ಬಜೆಟ್ ಬಗ್ಗೆ ವಿಚಾರ ಸಂಕೀರ್ಣ ಏರ್ಪಡಿಸಬೇಕು ಎಂದು ಯೋಚನೆ ಇದೆ. ರಾಜ್ಯ ಸರ್ಕಾರ ಈ ಬಾರಿ ವಿಶೇಷವಾಗಿ ಚೈಲ್ಡ್ ಬಜೆಟ್ ಅನ್ನು ಘೋಷಣೆ ಮಾಡಿದೆ ಇದರಲ್ಲಿ ಸುಮಾರು 34 ಸಾವಿರ ಕೋಟಿ ರೂ ಹಣವನ್ನು ಇಟ್ಟಿದ್ದಾರೆ ಎಂದು ರಾಮದಾಸ್ ತಿಳಿಸಿದರು
ಮೂಡಾ ಅಧ್ಯಕ್ಷ ಹೆಚ್. ವಿ. ರಾಜೀವ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಪೂರ್ಣಿಮಾ, ಡಿ. ಹೆಚ್. ಓ. ಪ್ರಸಾದ್, ಡಿ ಡಿ ಪಿ ಐ ರಾಮಚಂದ್ರರಾಜೇ ಅರಸ್, ಮೈಸೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಾರಾಧ್ಯ, ನಗರಪಾಲಿಕಾ ಸದಸ್ಯರಾದ ಪಲ್ಲವಿ, ಬೇಗಂ, ಆಸತ್ರೆಯ ಕಮಿಟಿ ಸದಸ್ಯರಾದ ಸಂತೋಷ್, ಪಿ.ಟಿ ಕೃಷ್ಣ, ಗಿರೀಶ್ ಮತ್ತಿತರರು ಹಾಜರಿದ್ದರು.

