ಮೈಸೂರು: ಫಿಲಂಸಿಟಿಗೆ ಪುನೀತ್ ರಾಜ್‍ಕುಮಾರ್ ಹೆಸರಿಟ್ಟರೆ ಸಂತಸವಾಗುತ್ತದೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು.
ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು
ಪುನೀತ್ ಹೆಸರಿಟ್ಟರೆ ಸಂತಸವಾಗುತ್ತದೆ ಆದರೆ ಕುಟುಂಬ ಸದಸ್ಯನಾಗಿ ನಾನು ಒತ್ತಾಯ ಮಾಡುವುದಿಲ್ಲ ಎಂದರು.
ಅಭಿಮಾನಿಗಳು ಅಭಿಮಾನದಿಂದ ಹೇಳುತ್ತಿದ್ದಾರೆ. ಅದರಂತೆ ಪುನೀತ್ ಹೆಸರಿಟ್ಟರೂ ಸಂತೋಷ. ಚಿತ್ರರಂಗಕ್ಕೆ ದುಡಿದವರು ಸಾಕಷ್ಟು ಮಂದಿ ಇದ್ದಾರೆ. ಅವರ ಹೆಸರನ್ನೂ ಇಡಬಹುದು. ಅದಕ್ಕೂ ನನ್ನ ಸಂತಸವಿದೆ ಎಂದು ಶಿವಣ್ಣ ಹೇಳಿದರು.
ಅಪ್ಪು ಇಲ್ಲದ ಹುಟ್ಟುಹಬ್ಬ ಆಚರಣೆ ತುಂಬ ದುಃಖದ ವಿಚಾರ ಎಂದು ಹೇಳಿದರು.
ಜೇಮ್ಸ್ ಚಿತ್ರದ ಡಬ್ಬಿಂಗ್ ವೇಳೆ ನನಗೆ ತುಂಬಾ ನೋವಾಗುತ್ತಿತ್ತು ಎಂದು ಭಾವುಕರಾದರು.
ಪುನೀತ್ ಹುಟ್ಟುಹಬ್ಬಕ್ಕೆ ಇಬ್ಬರೂ ಗಿಫ್ಟ್ ಗಳನ್ನು ಶೇರ್ ಮಾಡುತ್ತಿದ್ದೆವು. ಅಪ್ಪುಗೆ ಬ್ರಾಂಡ್ ವಾಚ್, ಬೆಲ್ಟ್, ಗಾಗಲ್ಸ್ ಸೇರಿದಂತೆ ಹಲವು ವಸ್ತುಗಳನ್ನು ಕೊಟ್ಟಿದ್ದೇನೆ.
ಅವನು ಸಹ ನನ್ನ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದ್ದಾನೆ. ಅಪ್ಪು ಎಲ್ಲರ ಹೃದಯದಲ್ಲೂ ಹಚ್ಚ ಹಸಿರಾಗಿ ಉಳಿದಿದ್ದಾನೆ ಎಂದು ದುಃಖಿಸುತ್ತಲೇ ಹೇಳಿದರು.
ರಾಜ್ಯಾದ್ಯಂತ ಜೇಮ್ಸ್ ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳು ನೆಚ್ಚಿನ ನಟನಿಗೆ ಗೌರವ ಸಲ್ಲಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ ಆದರೆ ಅವನೇ ಇಲ್ಲ ಎಂದು ಮರುಗಿದರು.
ಗಾಯತ್ರಿ ಚಿತ್ರಮಂದಿರದ ಬಳಿ ಶಿವಣ್ಣನನ್ನು ಕಂಡ ಅಭಿಮಾನಿಗಳು ಹರ್ಷೋದ್ಘಾರ ಮಾಡಿದರು. ಕೆಲಕಾಲ ಅಭಿಮಾನಿಗಳ ಜತೆ ಕುಳಿತು ಶಿವಣ್ಣ ಜೇಮ್ಸ್ ಚಿತ್ರ ವೀಕ್ಷಿಸಿದರು.

