ಮಹಿಳೆಯ ಬರ್ಬರ ಹತ್ಯೆ

ಹಾಸನ: ಮನೆಯ ಬಳಿ ಬಟ್ಟೆ ತೊಳೆಯುತ್ತಿದ್ದ ಒಂಟಿ ಮಹಿಳೆಯನ್ನು  ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾಸನ ತಾಲೂಕಿನ ದೊಡ್ಡಪುರ ಗ್ರಾಮದಲ್ಲಿ   ನಡೆದಿದೆ.

ಗ್ರಾಮದ ಗುರುಪ್ರಸಾದ್ ಪತ್ನಿ ರೇವತಿ(35) ಕೊಲೆಯಾದ ದುರ್ದೈವಿ.

ಹಂತಕರು ಮನೆಯ ಬಳಿಯೇ ಪತಿ ಹಾಗೂ ಮಕ್ಕಳು ಇಲ್ಲದ ವೇಳೆ ಹತ್ಯೆ ಮಾಡಿದ್ದಾರೆ

ಅತ್ಯಾಚಾರಕ್ಕೆ ಯತ್ನಿಸಿದಾಗ ಪ್ರತಿರೋಧ ತೋರಿದ ಹಿನ್ನಲೆಯಲ್ಲಿ ಆಕೆಯನ್ನು ಕೊಚ್ಚಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಸ್ಥಳಕ್ಕೆ ಶ್ವಾನದಳ, ಹೆಚ್ಚುವರಿ ಎಸ್ಪಿ ಡಾ.ನಂದಿನಿ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. 

ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಂತಕರ ಪತ್ತೆಗೆ ತಂಡ ರಚಿಸಲಾಗಿದೆ.