ಮೈಸೂರು: ಈ ಬಾರಿ ಶಿಕ್ಷಣ ಅಧಿಕಾರಿಗಳು ಸಾಕಷ್ಟು ಶ್ರಮವನ್ನು ವಹಿಸಿ ಮಕ್ಕಳಿಗೆ ಉತ್ತಮವಾಗಿ ಪರೀಕ್ಷೆ ಬರೆಯಲು ಸಜ್ಜು ಮಾಡಿದ್ದಾರೆ. ಯಾವ ವಿದ್ಯಾರ್ಥಿಯೂ ಅನ್ನುತ್ತೀರ್ಣರಾಗದ ರೀತಿಯಲ್ಲಿ ತಯಾರು ಮಾಡಿದ್ದೇವೆ ಎಂದು ಶಾಸಕ ಎಸ್. ಎ.ರಾಮದಾಸ್ ಹೇಳಿದರು.
ಸೋಮವಾರದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಶಾಸಕರು ನಗರದ ಸೇಂಟ್ ಮೆರೀಸ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಾಗೂ ಪೆನ್ನನ್ನು ನೀಡಿ ಧೈರ್ಯ ತುಂಬುವ ಕೆಲಸ ಮಾಡಿದರು.
ಈ ವೇಳೆ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು ಯಾವೊಬ್ಬ ವಿದ್ಯಾರ್ಥಿ ಅನುತ್ತೀರ್ಣರಾಗದಂತೆ ಸಿದ್ದಪಡಿಸಿದ್ದೇವೆ.ಆದರೂ ಕೂಡಾ ಫೇಲ್ ಆದರೆ ಜೂನ್ ಪರೀಕ್ಷೆಗೆ ಬೇಕಾದಂತಹ ತರಬೇತಿ ನೀಡುತ್ತೇವೆ ಎಂದು ಹೇಳಿದರು.
ಒಂದು ವೇಳೆ ಅದರಲ್ಲೂ ಅನ್ನುತ್ತೀರ್ಣರಾದರೆ ಸ್ಕಿಲ್ ನೀಡಿ ಜೀವನಕ್ಕೆ ಬೇಕಾದ ದಾರಿ ಮಾಡಿಕೊಡುತ್ತೇವೆ .ಈ ಬಾರಿ ಮೈಸೂರಿಗೆ ಒಳ್ಳೆಯ ಫಲಿತಾಂಶ ಬರುತ್ತದೆ ಎಂಬ ಭರವಸೆ ಇದೆ ಎಂದು ರಾಮದಾಸ್ ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕ್ಷೇತ್ರದಲ್ಲಿನ 12 ಕೇಂದ್ರದಲ್ಲೂ ಅಲ್ಲಿರುವ 4 ಸಾವಿರಕ್ಕೂ ಅಧಿಕ ಮಕ್ಕಳಿಗೆ ಧೈರ್ಯ ಹಾಗೂ ವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ಕೋವಿಡ್ ನಂತರದಲ್ಲಿ ಮಕ್ಕಳಿಗೆ ಭಯವಿತ್ತು ಆದರೆ ಅವರಿಗೆ ಧೈರ್ಯವನ್ನು ನೀಡುವ ಕೆಲಸ ಸರ್ಕಾರ ಮಾಡಿದೆ. ನಾವು ನಮ್ಮ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹಾಗೂ ಮಕ್ಕಳ ಜೊತೆಗೆ ಸಂವಾದ ಕಾರ್ಯಕ್ರಮವನ್ನು ಮಾಡಿದ್ದೆವು ಎಂದು ಹೇಳಿದರು.
ನಮ್ಮ ಕಚೇರಿಯಿಂದ ದಿನಂಪ್ರತಿ 10 ನೆ ತರಗತಿ ವಿದ್ಯಾರ್ಥಿಗಳಿಗೆ ಫೋನ್ ಕರೆ ಮಾಡಿ ಧೈರ್ಯ ತುಂಬುವ ಕೆಲಸವನ್ನೂ ಮಾಡಿದ್ದೇವೆ. ಮುಖ್ಯವಾಗಿ ಜೀವನದ ಮೊದಲ ಪಬ್ಲಿಕ್ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆಯುತ್ತಿದ್ದಾರೆ ಅದಕ್ಕಾಗಿ ಅವರಲ್ಲಿ ವಿಶ್ವಾಸ ಮೂಡಿಸಿದ್ದೇವೆ ಎಂದರು.
ಕಳೆದ ವರ್ಷ ಮೈಸೂರಿನಲ್ಲಿ ಉತ್ತಮ ಪ್ರಗತಿಯಾಗಿದೆ ಸುಮಾರು 6 ಜನ ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದಿದ್ದರು, ಅದರಲ್ಲಿ 5 ಜನ ನಮ್ಮ ಕ್ಷೇತ್ರದವರೇ ಆಗಿದ್ದಾರೆ ಎಂಬುದು ಸಂತಸದ ಸಂಗತಿ ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸ್, ಮೈಸೂರು ದಕ್ಷಿಣ ವಲಯದ ಬಿ.ಇ. ಒ ಆರ್ ರಾಮಾರಾಧ್ಯ, ನಗರಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ಭಾಜಪಾ ಕೆ.ಆರ್.ಕ್ಷೇತ್ರ ಪ್ರಧಾನಕಾರ್ಯದರ್ಶಿ ಓಂ ಶ್ರೀನಿವಾಸ್, ಉಪಾಧ್ಯಕ್ಷರಾದ ಬಾಲಕೃಷ್ಣ ಎಂ.ಆರ್, ಸಂತೋಷ್ ಶಂಭು, ಆಶ್ರಯ ಸಮಿತಿಯ ಹೇಮಂತ್ ಕುಮಾರ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸೇಂಟ್ ಮೇರೀಸ್ ಶಾಲೆಯ ಶಿಕ್ಷಕ ಹಾಗೂ ಆಡಳಿತ ವೃಂದದವರು ಹಾಜರಿದ್ದರು.

