ಪರೀಕ್ಷೆ ಬರೆಯುವಾಗಲೇ ವಿದ್ಯಾರ್ಥಿನಿಗೆ ಹಾರ್ಟ್ ಅಟ್ಯಾಕ್

ಮೈಸೂರು : ಎಸ್ ಎಸ್‌ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಒಂದು ಪ್ರಮುಖ‌ ಘಟ್ಟ.‌ಇಂತಹ ಮುಖ್ಯವಾದ ಪರೀಕ್ಷೆ ಬರೆಯುವ ಸಂದರ್ಭದಲ್ಲೇ  ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವನ್ನಪ್ಪಿರುವ  ಹೃದಯ ವಿದ್ರಾವಕ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಟಿ.ನರಸೀಪುರ ತಾಲೂಕಿನ ವಿದ್ಯೋದಯ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ‌‌ ನಡೆದಿದೆ.

ಪರೀಕ್ಷೆ ಬರೆಯುವ ವೇಳೆ ಕುಸಿದು ಬಿದ್ದ ವಿದ್ಯಾರ್ಥಿನಿ ಅನುಶ್ರೀಯನ್ನು ಟಿ.ನರಸೀಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ  ಸಾವನ್ನಪ್ಪಿದ್ದಾಳೆ.

ಈಕೆ ಟಿ.ನರಸೀಪುರ ತಾಲೂಕಿನ ಅಕ್ಕೂರು ಗ್ರಾಮದ ನಿವಾಸಿ.

ಮಾದಾಪುರ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.