ಬೈಂದೂರು: ಕೊಲ್ಲೂರು ಮೂಕಾಂಬಿಕೆಗೆ ನಡೆಯುವ ಸಲಾಂ ಹೆಸರಿನ ಮಂಗಳಾರತಿ ನಿಲ್ಲಿಸುವಂತೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಆಗ್ರಹಿಸಿದ್ದಾರೆ.
ಬೈಂದೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಟಿಪ್ಪು ನಮ್ಮ ದೇವರನ್ನ ಅವಹೇಳನ ಮಾಡಿದ್ದಾನೆ. ನಮ್ಮ ಸಮಾಜವನ್ನು ನಾಶ ಮಾಡಲು ಹೊರಟಿದ್ದ. ಹೀಗಾಗಿ ವ್ಯಕ್ತಿ ಹೆಸರಲ್ಲಿ ಪೂಜೆ ಮಾಡುವುದು ಸರಿಯಲ್ಲ ಅದು ದೇವರಿಗೆ ಮಾಡಿದ ಅಪಮಾನ ಎಂದು ಹೇಳಿದರು.
ಇದು ಹೀಗೆ ಮುಂದುವರಿದರೆ ಮುಂದೆ ಅಲ್ಲಾಹು ಸಲಾಂ ಅಂತಾ ಬರುವ ಸಾಧ್ಯತೆ ಇದೆ. ಆದಷ್ಟು ಬೇಗ ಸಲಾಂ ಮಂಗಳಾರತಿ ನಿಲ್ಲಲಿ ದೇವರ ಹೆಸರಿನಲ್ಲಿ ಪೂಜೆ ನಡೆಯಲಿ ಎಂದು ತಿಳಿಸಿದರು. ನಮ್ಮ ದೇವಸ್ಥಾನದಲ್ಲಿ ನಮ್ಮತನ ಇರಬೇಕೇ ಹೊರತು ಬೇರೆಯದಲ್ಲ ಎಂದು ಕಲ್ಲಡ್ಕ ಪ್ರಭಾಕರ್ ಹೇಳಿದರು.

