ಏರುತ್ತಲೇ ಇದೆ ಪೆಟ್ರೋಲ್, ಡೀಸೆಲ್ ಬೆಲೆ

ನವದೆಹಲಿ: ಕಳೆದ 10 ದಿನಗಳಿಂದ ಸತತವಾಗಿ ತೈಲಬೆಲೆ ಏರಿಕೆಯಾಗುತ್ತಿರುವುದರಿಂದ ಜನಸಾಮಾನ್ಯರು ಕಂಗೆಡುವಂತಾಗಿದೆ.

ಗುರುವಾರ ಬೆಳಿಗ್ಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‍ಗೆ ತಲಾ 80 ಪೈಸೆ ಹೆಚ್ಚಳವಾಗಿದೆ. ಒಟ್ಟಾರೆ ಒಂದೇ ಸಮ ಏರಿಕೆಯ ಪರಿಣಾಮ ಮಾ.22 ರಿಂದ ಇಲ್ಲಿತನಕ 6.40 ರೂ.ಗೆ ಏರಿಕೆಯಾದಂತಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ದರ ಈ ಹಿಂದೆ 101.01 ರೂ.ಗೆ ಹೋಲಿಸಿದರೆ ಈಗ 101.81 ರೂ.ಗಳಾಗಿದೆ.ಮತ್ತು ಡೀಸೆಲ್ ರೂ.92.27 ರಿಂದ ರೂ.93.07 ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ 106.46 ರೂ ಇದ್ದು ಔರಂಗಾಬಾದ್‍ನಲ್ಲಿ ಅತಿ ಹೆಚ್ಚು 117.50 ರೂ ಇದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ 112 ಡಾಲರ್ ಅಸುಪಾಸಿನಲ್ಲಿದೆ

ದೇಶಾದ್ಯಂತ ವಿವಿಧ ಸಂಘಟನೆಗಳು ಹಾಗೂ ಕಾಂಗ್ರೇಸ್ ಸೇರಿದಂತೆ ಇತರೆ ಪಕ್ಷಗಳು ಪ್ರತಿಭಟನೆ ನಡೆಸಿವೆ.

ಪೆಟ್ರೋಲ್,ಡೀಸೆಲ್‌ ಬೆಲೆ ಏರಿಕೆಯಿಂದ  ಅಗತ್ಯವಸ್ತುಗಳ ಬೆಲೆಯು ಹೆಚ್ಚಳವಾಗುತ್ತದೆ.ಕೂಡಲೆ ತೈಲ ದರ ಏರಿಕೆ ನಿಲ್ಲಿಸಬೇಕೆಂದು ಸಾಮಾಜಿಕ ಜಾಲತಾಣಲ್ಲಿ ಜನರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.