ಬಿಜೆಪಿಗೆ ಹೊರಟ ಹೊರಟ್ಟಿ

ಬೆಂಗಳೂರು: ನಾನು ಬಿಜೆಪಿ ಸೇರುವುದು ನಿಶ್ಚಿತ ಎಂದು ‌ಜೆಡಿಎಸ್ ಮುಖಂಡ‌ ಹಾಗೂ ವಿಧಾನ ಪರಿಷತ್ ಸಭಾಪತಿ‌ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಗೆ ಸೇರ್ಪಡೆ ಯಾಗುವ ವಿಚಾರವನ್ನು ಜೆಡಿಎಸ್ ನಾಯಕರಿಗೆ ತಿಳಿಸಿದ್ದೇನೆ. ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ಒಪ್ಪಿದ್ದಾರೆ ಎಂದು ಹೇಳಿದರು.

ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಸೇರಿದಂತೆ ಹಲವು ನಾಯಕರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.

ಬಿಜೆಪಿ ಸೇರ್ಪಡೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ, ಅದರೆ ಅಲ್ಲಿಗೆ ಹೋಗುವುದು ನಿಶ್ಚಿತ. ಶೀಘ್ರ ನಾನು ಸೇರ್ಪಡೆಯಾಗುತ್ತೇನೆ ಎಂದು ಹೊರಟ್ಟಿ ಸ್ಪಷ್ಟಪಡಿಸಿದರು.

ಈಗಾಗಲೇ ಜೆಡಿಎಸ್ ಕಾರ್ಯಕರ್ತರು ಹಾಗೂ ನಮ್ಮ ಕ್ಷೇತ್ರದ ಜನರಿಗೂ ಈ ವಿಷಯ ತಿಳಿಸಿದ್ದೇನೆ ಎಲ್ಲರಿಗೂ ಸಹಮತವಿದೆ ಎಂದು ಹೇಳಿದರು.