ಧಾರ್ಮಿಕ ಮಂದಿರಗಳಲ್ಲಿ ಧ್ವನಿವರ್ಧಕ ನಿಲ್ಲಿಸದಿದ್ದರೆ ಹೋರಾಟ -ಮುತಾಲಿಕ್

ಬೆಂಗಳೂರು: ಮಸೀದಿಗಳಲ್ಲಿ ಬೆಳಗಿನ ಜಾವ ಜೋರಾಗಿ ಧ್ವನಿವರ್ಧಕ ಹಾಕುವುದನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,ಸೌಂಡ್ ಹಾಕುವಾಗ ಸರ್ಕಾರ ನಿಶಬ್ಧ ವಲಯ ಅಂತ ಗುರುತಿಸಿದೆ ಅಂತಹ ಕಡೆಗಳಲ್ಲಿ ಶಾಂತ ವಾತಾವರಣ ಇರಬೇಕು ಎಂದು ಹೇಳಿದರು.

ಆಸ್ಪತ್ರೆ, ಶಾಲೆ, ಸರ್ಕಾರಿ ಕಚೇರಿ,  ಜನವಸತಿ ಪ್ರದೇಶಗಳು ನಿಶಬ್ಧ ವಲಯ ಅಂತ ಗುರುತಿಸಲಾಗಿದೆ.ಈ ನಾಲ್ಕೂ ಪ್ರದೇಶಗಳಲ್ಲಿ ಮಸೀದಿಯವರು ಮೈಕಿನ ಮೂಲಕ ಪ್ರಾರ್ಥನೆ ಮಾಡಿ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ದೂರಿದರು.

ಮಸೀದಿ,ಚರ್ಚ್ ಹಾಗೂ ದೇವಸ್ಥಾನ ಗಳಲ್ಲೂ ಶಾಂತಿ ಕಾಪಾಡಬೇಕು ಯಾರೇ ಧ್ವನಿವರ್ಧಕ‌ ಜೋರಾಗಿ ಹಾಕಿದರೂ ಅದು ತಪ್ಪು,ಇದರ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡಿದ್ದೆವು. ಆದರೆ ನಿರ್ಲಜ್ಜ  ಸರ್ಕಾರ ಇದನ್ನ ತಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರದಕಾರಕ್ಕೆ ನಾವು ಎಚ್ಚರಿಕೆಯನ್ನ ಕೊಡುತ್ತಿದ್ದೇವೆ.ನಾವು ಬೆಳಗ್ಗೆ 5ಗಂಟೆಗೆ ಎಲ್ಲಾ ದೇವಸ್ಥಾನಗಳಲ್ಲಿ, ಎಲ್ಲಾ ಮಠಗಳಲ್ಲಿ ಮೈಕ್ ಹಾಕಿ ಭಜನೆ ಮಾಡುತ್ತೇವೆ ತಡೆಯಲಿ ಎಂದು ಸವಾಲು ಹಾಕಿದರು.

ನಿಯಮ ಪಾಲನೆ ಮಾಡದ ಮಸೀದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.