ಮೈಸೂರು: ಮನೆ ಮುಂದೆ ನಿಲ್ಲಿಸಲಾಗಿದ್ದ ಎರಡು ಕಾರುಗಳಿಗೆ ಯಾರೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮೈಸೂರಿನ ರಾಘವೇಂದ್ರ ನಗರದಲ್ಲಿ ನಡೆದಿದೆ.
ಕಿಡಿಗೇಡಿ ಬೆಂಕಿ ಹಚ್ಚುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾರುಗಳು ಸುರೇಂದ್ರ ಎಂಬವರಿಗೆ ಸೇರಿದುದು.
ಮಧ್ಯರಾತ್ರಿ ಕಾರಿನ ಬಳಿ ಮುಸುಕುಧಾರಿ ವ್ಯಕ್ತಿಯೊಬ್ಬ ಬಕೆಟ್ ನಲ್ಲಿ ಪೆಟ್ರೋಲ್ ತುಂಬಿಸಿ ತಂದಂತೆ ಕಾಣಿಸುತ್ತಿದ್ದು, ಎರಡೂ ಕಾರುಗಳ ಮೇಲೂ ಸುರಿದಿದ್ದಾನೆ.
ಬಳಿಕ ಎರಡು ಕಾರುಗಳಿಗೆ ವ್ಯಕ್ತಿ ಬೆಂಕಿ ಹಚ್ಚಿದ್ದಾನೆ. ಕಾರುಗಳು ಧಗಧಗನೆ ಹೊತ್ತಿ ಹರಿಯುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ನಜರಬಾದ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.

