ಪಾಕಿಸ್ತಾನದ ಪ್ರಧಾನಿ ಪಟ್ಟದಿಂದ ಇಮ್ರಾನ್ ಔಟ್

ಇಸ್ಲಮಾಬಾದ್: ಸುದೀರ್ಘ ಸಂಸತ್ ಕಲಾಪ ಹಾಗೂ ಹಲವು ನಾಟಕೀಯ ಬೆಳವಣಿಗೆಗಳ ನಡುವೆ ಅವಿಶ್ವಾಸ ಗೊತ್ತುವಳಿಯಲ್ಲಿ ಇಮ್ರಾನ್ ಖಾನ್ ಸೋಲುಂಡಿದ್ದು ಪಾಕಿಸ್ತಾನದ ಪ್ರಧಾನಿ ಪಟ್ಟದಿಂದ ವಜಾಗೊಂಡಿದ್ದಾರೆ.

ಈಗ ಪ್ರಧಾನಿ ಆಯ್ಕೆಗೆ ಕಸರತುಗಳು ಶುರುವಾಗಿವೆ.

ಕೊನೆಯ ಕ್ಷಣದವರೆಗೂ ಹೋರಾಡುತ್ತೇನೆ ಎಂದು ಘೋಷಿಸಿ ರಾಜೀನಾಮೆ ನೀಡಲು ನಿರಾಕರಿಸಿದ್ದರು.

ಶನಿವಾರ ಇಮ್ರಾನ್ ಖಾನ್ ಕುರಿತ ಅವಿಶ್ವಾಸ ವಿರುದ್ಧ 174 ಮಂದಿ ಮತಚಲಾಯಿಸಿದ್ದರು. ಅವಿಶ್ವಾಸ ಮಂಡನೆ ವೇಳೆ ಕಲಾಪದಲ್ಲಿ ಇಮ್ರಾನ್ ಖಾನ್ ಹಾಜರಿರಲಿಲ್ಲ.

ಅವಿಶ್ವಾಸ ನಿಲುವಳಿ ಗೆಲುವ ಕಂಡ ಬಳಿಕ ಪಾಕ್‍ನ ಸಂಸತ್ ಇಮ್ರಾನ್ ಖಾನ್‍ರನ್ನು ಪದಚ್ಯುತಗೊಳಿಸಿದೆ.ಬೆಲೆ ಏರಿಕೆ, ಆರ್ಥಿಕ ಹಿಂಜರಿತ, ಕೋವಿಡ್ ನಿರ್ವಹಣೆಯಲ್ಲಿನ ಲೋಪಗಳು ಸೇರಿದಂತೆ ಹಲವು ಕಾರಣಗಳಿಂದ ಇಮ್ರಾನ್ ಖಾನ್ ವಿರುದ್ಧ ಆಕ್ರೋಶಗಳು ಕೇಳಿ ಬಂದಿದ್ದವು.