ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ -ಈಶ್ವರಪ್ಪ

ಶಿವಮೊಗ್ಗ: ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ  ತಿಳಿಸಿದರು.

ಶಿವಮೊಗ್ಗದಲ್ಲಿ ಸುದ‍್ಧಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು,ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಈ ಬಗ್ಗೆ ತನಿಖೆಯಾಗಬೇಕು. ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆಯಾಗಲಿ. ರಾಜೀನಾಮೆ ನೀಡಲು ಯಾವುದೇ ಕಾರಣಗಳಿಲ್ಲ.  ಯಾವುದೇ ಕಾರಣಕ್ಕೂ ನಾನು ಹಂಡ್ರೆಡ್ ಪರ್ಸೆಂಟ್ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಕಂಡ ತುಂಡವಾಗಿ ಹೇಳಿದರು.

ಗ್ರಾಮೀಣಾಭಿಬದ್ಧಿ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ. ಸಂತೋಷ್ ಯಾವುದೇ ಡೆತ್ ನೋಟ್ ಬರೆದಿಲ್ಲ.  ವಾಪ್ಸಪ್ ನಲ್ಲಿ ಟೈಪ್ ಮಾಡಿದ್ದಾರೆ. ರಾಜೀನಾಮೆಗಾಗಿ ಕಾಂಗ್ರೆಸ್ ನವರು ಒತ್ತಾಯಿಸುತ್ತಿದ್ದಾರೆ.

ಕಾಮಗಾರಿ ಟೆಂಡರ್ ನೀಡಬೇಕಾದರೆ ಕೆಲ ನಿಯಮಗಳಿರುತ್ತದೆ.   ಆದರೆ ಟೆಂಡರ್ ನೀಡದೆಯೇ ಕಾಮಗಾರಿ ಮಾಡಲಾಗುತ್ತಾ. ಈ ವಿಚಾರ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯಗೆ ಗೊತ್ತಿಲ್ಲವಾ ಎಂದು ಖಾರವಾಗಿ ಪ್ರಶ್ನಿಸಿದರು.

ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಖುದ್ದು ಹೇಳಿಕೆ ನೀಡಿದ್ದರು. ಆದರೆ ಇಲ್ಲಿ ವಾಟ್ಸಪ್ ನಲ್ಲಿ ಟೈಪ್ ಮಾಡಿದ್ದಾರೆ. ಒಮ್ಮೆಯೂ ನಾನು ಸಂತೋಷ್ ಪಾಟೀಲ್ ಮುಖ  ನೋಡಿಲ್ಲ.  ಆದರೆ  80 ಬಾರಿ ಭೇಟಿ ಮಾಡಿದ್ದೆ ಎಂದು ಆರೋಪಿಸಿದ್ದಾರೆ ಇದೆಲ್ಲ ಸುಳ್ಳು ಎಂದರು.

ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವರ ಕಚೇರಿಗೆ ದೂರು ನೀಡಿದ್ದಾರೆ. ಕೇಂದ್ರದಿಂದ ಕೇಳಿದ್ಧ ಸ್ಪಷ್ಟನೆಗೆ ಉತ್ತರ ನೀಡಿದ್ದೇವೆ. ಅಮಿತ್ ಶಾ ಮೋದಿಗೂ ದೂರು ನೀಡಿದ್ದಾರೆ. ದೆಹಲಿಗೆ  ಫ್ಲೈಟ್ ಬುಕ್ ಮಾಡಿಕೊಟ್ಟವರು ಯಾರು ಎಂದು ಸಚಿವರು ಪ್ರಶ್ನಿಸಿದರು.

ಷಡ್ಯಂತ್ರದ ಬಗ್ಗೆ ತನಿಖೆಯಾಗಬೇಕು. ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ತನಿಖೆಯಾಗಬೇಕು ನಾಳೆ ನಾಡಿದ್ದು ಬೆಂಗಳೂರಿಗೆ ತೆರಳಿ ಸಿಎಂ ಭೇಟಿಯಾಗಿ ಎಲ್ಲ ವಿಷಯಗಳ ಬಗ್ಗೆ ಮಾತನಾಡುವೆ ಎಂದು ಈಶ್ವರಪ್ಪ ತಿಳಿಸಿದರು.