ಯುವಜನರಿಗೆ ರಾಮನ ಆದರ್ಶ ಸ್ಫೂರ್ತಿ -ಇಳೈ ಆಳ್ವಾರ್ ಸ್ವಾಮೀಜಿ

ಮೈಸೂರು: ದೈವಿ ಪುರುಷನಾದ ರಾಮನ ಬದುಕಿನ ಆದರ್ಶಗಳು ಎಲ್ಲ ಧರ್ಮದ ಯುವಜನರಿಗೆ ಸ್ಫೂರ್ತಿಯಾಗಿದೆ ಎಂದು ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಹೇಳಿದರು.

ಮೈಸೂರಿನ ಮಹಾಜನ ಶ್ರೀ ರಾಮ  ಮಂದಿರದಲ್ಲಿ ಶ್ರೀರಾಮ ನವಮಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ  ಮಾತನಾಡಿದರು.

ರಾಮನವಮಿ ಪ್ರಯುಕ್ತ ಇಲ್ಲಿಯ ಹನುಮಾನ ಮಂದಿರದಲ್ಲಿ  ಜೈಶ್ರೀರಾಮ ಸೇನಾ ಸಂಘಟನೆಯ ಪದಾಧಿಕಾರಿಗಳು            

ಕಾರ್ಯಕ್ರಮ ಆಯೋಜಿಸಿದ್ದರು

ರಾಮ ವನವಾಸಕ್ಕೆ ತೆರಳಿದಾಗ ಪತ್ನಿ ಸೀತೆಯೂ ಜೊತೆಯಾಗಿ ಹೋಗುವ ಸನ್ನಿವೇಶ ಎಲ್ಲ ದಂಪತಿಗೆ ಮಾರ್ಗದರ್ಶಿ ಆಗಿದೆ. ಜೀವನದಲ್ಲಿ ಎಷ್ಟೇ ಕಷ್ಟ ಬಂದಾಗಲೂ ಪತಿ- ಪತ್ನಿ ಕೈಜೋಡಿಸಿ ಸಂಸಾರದ ನೌಕೆ ಸಾಗಿಸಬೇಕು ಎಂಬ ಅಮೂಲ್ಯ ಸಂದೇಶ ಅದು ಸಾರುತ್ತದೆ ಎಂದು ಸ್ವಾಮೀಜಿ ತಿಳಿಸಿದರು.

ಜಯಂತಿಗಳು ಮೆರವಣಿಗೆ ಮಾಡುವುದರಿಂದ ಸಾರ್ಥಕ  ಆಗುವುದಿಲ್ಲ. ಬದಲಿಗೆ ಮಹನೀಯರ ಆದರ್ಶಗಳನ್ನು ಬದುಕಿನಲ್ಲಿ ಆಚರಣೆಗೆ ತಂದಾಗ ಮಾತ್ರ ಅರ್ಥ ಬರುತ್ತದೆ ಎಂದು ಹೇಳಿದರು.

ಎಲ್ಲರೂ ರಾಮಾಯಣ ನಿತ್ಯ ಪಠಿಸಬೇಕು. ಅದರಲ್ಲಿನ ಮಾನವೀಯ ಮೌಲ್ಯಗಳನ್ನು ಎಲ್ಲರೂ ಪಾಲಿಸಬೇಕು ಎಂದು ಸಲಹೆ ನೀಡಿದರು.

ಶ್ರೀ ರಾಮ ಮಂದಿರದ ಉಪಾಧ್ಯಕ್ಷರಾದ ರಾಂಪ್ರಸಾದ್ ,ಕಾರ್ಯದರ್ಶಿ ಮಾಧುರಾವ್ ,

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ್ ಅಯ್ಯಂಗಾರ್, ನಿರ್ದೇಶಕ ಮಂಡಳಿಯ ಅಶ್ವತ್ಥ್ ನಾರಾಯಣ್, ವಿ. ಎನ್. ಕೃಷ್ಣ , ಖಜಾಂಜಿ ಪಿ. ಎಸ್. ಶೇಷಾದ್ರಿ ,ಸಿ. ವಿ. ವೆಂಕಟೇಶ್ ಮೂರ್ತಿ,ಅರುಣ್  ಇನ್ನಿತರರು ಹಾಜರಿದ್ದರು.