ದೇವಾಲಯಗಳ ಮೇಲೆ ಕಲ್ಲು ತೂರಾಟ -ಮುತಾಲಿಕ್ ಆಕ್ರೋಶ

ಧಾರವಾಡ: ದೇವಸ್ಥಾನಗಳು ಶಾಂತಿಯ ಪ್ರತೀಕ. ಆದರೆ ದೇವಸ್ಥಾನದ ಮೇಲೆಯೇ ದಾಳಿ ಮಾಡಿದ್ದು ಖಂಡನೀಯ ಎಂದು ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಹುಬ್ಬಳ್ಳಿ ಪ್ರಕರಣ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶನಿವಾರ ನಡೆದ ಹುಬ್ಬಳ್ಳಿ ಗಲಾಟೆಯನ್ನು ನಾನು ಖಂಡಿಸುತ್ತೇನೆ ಎಂದರು.

ಮೆಕ್ಕಾ ಮದೀನಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ್ದಕ್ಕೆ ಇಷ್ಟು ಆಕ್ರೋಶ ಸರೀನಾ ಎಂದು ಪ್ರಶ್ನಿಸಿದರು.

ಕಾನೂನಿದೆ, ಠಾಣೆಯಿದೆ, ನ್ಯಾಯಾಲಯವಿದೆ ನೀವು ಅಲ್ಲಿ ನ್ಯಾಯ ಕೇಳಬಹುದು ಎಂದು ದಾಂಧಲೆ ನಡೆಸಿದವರಿಗೆ ಮುತಾಲಿಕ್ ಹೇಳಿದರು.

ಇಸ್ಲಾಂ ಎಂದರೆ ಶಾಂತಿ ಸಂದೇಶ ಸಾರುತ್ತದೆ. ಇದು ನಿಮ್ಮ ಶಾಂತಿ ಸಂದೇಶನಾ, ಇದು ಹೇಯ ಹಾಗೂ ಕ್ರೌರ್ಯ ಘಟನೆ ಇದೆಲ್ಲಾ ಖಂಡಿತಾ ಸರಿಯಲ್ಲ ಎಂದು ತಿಳಿಸಿದರು.

ಇದೊಂದು ಪೂರ್ವಯೋಜಿತ ಕೃತ್ಯ. ಅಲ್ಲಿ ಮೂರು ಜನ ಎಂಐಎಂ ಪಾಲಿಕೆ ಸದಸ್ಯರಿದ್ದಾರೆ. ಪಿಎಫ್‍ಐ ಸದ್ಯಸರೇ ಇದಕ್ಕೆ ಕಾರಣ ಎಂದು ಮುತಾಲಿಕ್  ಆರೋಪಿಸಿದರು.

ದೇವಸ್ಥಾನ ಮೇಲೆ ಏಕೆ ದಾಳಿ ಮಾಡಿದ್ದು, ದೇವಸ್ಥಾನ ಶಾಂತಿಯ ಪ್ರತೀಕವಾಗಿದೆ. ಮುಸ್ಲಿಂ ಮುಖಂಡರು ಇದಕ್ಕೆ ಉತ್ತರ ನೀಡಬೇಕು ಎಂದು ಅಗ್ರಹಿಸಿದರು.

ದೇವಸ್ಥಾನದ ಮೇಲೆ ದಾಳಿ ಮಾಡಿರುವುದು ಗಜನಿ ಸಂಸ್ಕೃತಿ, ಔರಂಗಜೇಬನ ಹಾಗೂ ಟಿಪ್ಪು ಸಂಸ್ಕೃತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರ ಮೇಲೆ ಹಲ್ಲೆ ಸರಿಯಲ್ಲ. ಗಡಿಯಲ್ಲಿ ಸೈನಿಕರು ಮಾಡುವ ಕೆಲಸವನ್ನು ಆಂತರಿಕವಾಗಿ ಪೊಲೀಸರು ಮಾಡುತ್ತಾರೆ. ಈ ಘಟನೆ ನೋಡಿದರೆ ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ನೆನಪಾಗುತ್ತಿದೆ. ಸರ್ಕಾರ ಇವರನ್ನ ಹದ್ದು ಬಸ್ತಿನಲ್ಲಿ ಇಡಬೇಕು ಎಂದು ಪ್ರಮೋದ್ ಮುತಾಲಿಕ್   ಆಗ್ರಹಿಸಿದರು.