ಕೇವಲ ಒಂದು ಪೋಸ್ಟ್ ನಿಂದ ಪ್ರಕ್ಷುಬ್ಧಗೊಂಡ ಹುಬ್ಬಳ್ಳಿ

ಹುಬ್ಬಳ್ಳಿ: ಕೇವಲ ಒಂದು ಪೋಸ್ಟ್ ನಿಂದ ವಾಣಿಜ್ಯ ನಗರಿ ಹುಬ್ಬಳ್ಳಿ‌‌ ಪ್ರಕ್ಷುಬ್ಧಗೊಂಡುಬಿಟ್ಟಿದೆ.

ಹುಬ್ಬಳಿಯಲ್ಲಿ ಒಂದು ಪೋಸ್ಟ್ ನಿಂದಾಗಿ ರಾತೋರಾತ್ರಿ ಗಲಾಟೆ ಆರಂಭವಾಗಿ ಹಿಂಸಾತ್ಮಕ ರೂಪ ಪಡೆದುಕೊಂಡ ಕಾರಣ  144 ಸೆಕ್ಷನ್ ಜಾರಿಗೊಳಿಸಲಾಗಿದೆ.

ಮೆಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಪೋಸ್ಟ್ ನಿಂದ ಗಲಾಟೆ ಶುರುವಾಗಿ ಹುಬ್ಬಳ್ಳಿ  ರಾತ್ರೋರಾತ್ರಿ ಹೊತ್ತಿ ಉರಿದಿದೆ.

ಹುಬ್ಬಳ್ಳಿಯಲ್ಲಿ ಪುಂಡರ ಗುಂಪು ದೇವಸ್ಥಾನ, ಆಸ್ಪತ್ರೆ, ಬಸ್, ಪೊಲೀಸರ ವಾಹನಗಳ ಮೇಲೆ ಕಲ್ಲೆಸೆದಿದೆ. ಪೊಲೀಸ್ ವಾಹನಗಳನ್ನೇ ಟಾರ್ಗೆಟ್ ಮಾಡಿ ದಾಂಧಲೆ ನಡೆಸಿದೆ.ಇದರಿಂದ ಕೆಲವು ಪೊಲೀಸರು ಗಾಯಗೊಂಡಿದ್ದಾರೆ.

ದುಷ್ಕರ್ಮಿಗಳು ಪೊಲೀಸ್ ಜೀಪ್‍ಗಳಿಗೆ ಕಲ್ಲುತೂರಾಟ ಮಾಡಿದ ಪರಿಣಾಮ ಗ್ಲಾಸ್ ಪುಡಿಪುಡಿಯಾಗಿದೆ. ಅಲ್ಲದೆ ಪೊಲೀಸ್ ವಾಹನಗಳನ್ನು ಪಲ್ಟಿ ಮಾಡಿ ದುಷ್ಕೃತ್ಯ ಮೆರೆಯಲಾಗಿದೆ.

ಗಲಭೆಕೋರರು ಕಲ್ಲು ತೂರಿದ ಪರಿಣಾಮ ದಿಡ್ಡಿ ಹನುಮಂತ ದೇವಸ್ಥಾನದ ಕಿಟಕಿ ಗ್ಲಾಸ್ ಪುಡಿಪುಡಿಯಾಗಿದೆ. ಹನುಮ ಜಯಂತಿ ಹಿನ್ನೆಲೆ ದೇಗುಲ ಅಲಂಕೃತಗೊಂಡಿತ್ತು. ಪುಂಡರು ನಡೆಸಿದ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.