ಹುಬ್ಬಳ್ಳಿ: ಶನಿವಾರ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎಐಎಂಐಎಂ ಪಕ್ಷದ ಮುಖಂಡ ಮಹಮದ್ ಆರೀಫ್ ಬಂಧಿತ.ಈತನೂ ಕೂಡಾ ಗಲಭೆಯ ಮಾಸ್ಟರ್ ಮೈಂಡ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಮದ್ ಆರೀಫ್ ಮೌಲ್ವಿ ವಾಸಿಂ ಪಠಾಣ್ ನೊಂದಿಗೆ ಸೇರಿ ಮಸೀದಿ ಮುಂದೆ ಜನರನ್ನು ಸೇರಿಸಿ ಅವರಲ್ಲಿ ಆಕ್ರೋಶ ಉಂಟಾಗುವಂತೆ ಪ್ರಚೋದನೆ ಮಾಡಿದ್ದ.
ಹುಬ್ಬಳ್ಳಿ ಪೊಲೀಸರು ಮಹಮದ್ ಆರೀಫ್ ನಿಂದ ಮೊಬೈಲ್ ಜಪ್ತಿ ಮಾಡಿದ್ದಾರೆ.ಗುರುವಾರ ಈತನು ಸೇರಿದಂತೆ 12 ಮಂದಿಯನ್ನು ಬಂಧಿಸಲಾಗಿದೆ
ಇದೀಗ ವಾಸಿಂ ಪಠಾಣ್ ನನ್ನು ಪತ್ತೆ ಹಚ್ಚಲು ಬಲೆ ಬೀಸಲಾಗಿದೆ.
ಹುಬ್ಬಳ್ಳಿ ಗಲಭೆ ಸಂಬಂಧ ಇದುವರೆಗೆ 126 ಮಂದಿಯನ್ನು ಬಂಧಿಸಲಾಗಿದೆ,ಬಂಧಿತರ ಸಂಖ್ಯೆ ಇನ್ನೂ ಹೆಚ್ಚಾಗಲಿದೆ.

