ಎಸ್ಡಿಪಿಐ ,ಪಿ ಎಫ್ ಐ ಸಂಘಟನೆಗಳ ನಿಷೇಧಕ್ಕೆ ಸಿದ್ಧತೆ -ಸಿ.ಟಿ.ರವಿ

ದೇವನಹಳ್ಳಿ: ಪದೇ ಪದೇ ಕೋಮು ಸಂಘರ್ಷ ಸೃಷ್ಟಿಸಿ ಅಶಾಂತಿಯ ವಾತಾವರಣ ನಿರ್ಮಿಸುತ್ತಿರುವ ಎಸ್‍ಡಿಪಿಐ ಮತ್ತು ಪಿ ಎಫ್‌ ಐ ಸೇರಿದಂತೆ ಸಮಾಜಘಾತುಕ ಸಂಘಟನೆಗಳನ್ನು ನಿಷೇಧಿಸಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್‍ಡಿಪಿಐ ಪಿಎಫ್ಐ ನಿಷೇಧಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ಆರಂಭವಾಗಿದೆ. ಸರ್ಕಾರ ಈ ಬಗ್ಗೆ ಎಲ್ಲಾ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದೆ ಎಂದು ತಿಳಿಸಿದರು.

ಮಸೀದಿಯ ಮೌಲ್ವಿಗಳ ತನಿಖೆ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಮಾಡಿದವರ ಬಗ್ಗೆ ತನಿಖೆ ಮಾಡುವುದರಲ್ಲಿ ತಪ್ಪಿಲ್ಲ ಎಂದರು.

ದೇಶದಲ್ಲಿ ನಡೆದ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಮೌಲ್ವಿಗಳ ಪಾತ್ರ ಸಾಭಿತಾಗಿದೆ. ಈ ಬಗ್ಗೆ ತನಿಖೆಯಾದರೆ ತಪ್ಪೇನಿಲ್ಲ,  ಇಂತಹವರನ್ನ ಕಾಂಗ್ರೇಸ್‍ನವರು ತಲೆಮೇಲೆ ಕೂರಿಸಿ ಕೊಂಡಿರಬಹುದು, ನಾವು ಯಾರನ್ನು ಓಲೈಸುವುದಿಲ್ಲ ಎಂದು ಸಿ.ಟಿ.ರವಿ ಹೇಳಿದರು.